ಪುತ್ತೂರು: ರಾ.ಹೆದ್ದಾರಿ 275 ರ ನೆಹರೂ ನಗರದಿಂದ ಮುರ, ಹಾಗೂ ಸುದಾನ ವಸತಿ ಶಾಲೆಯ ತನಕ ರಸ್ತೆ ಬದಿ ಮಣ್ಣು ಹಾಕಲಾಗಿದ್ದು ಮಳೆಗೆ ಮಣ್ಣು ಕೆಸರಾಗಿ ಸಂಕಷ್ಟ ಎದುರಾಗಿದೆ ಎಂಬ ಸಾರ್ಬಜನಿಕರ ದೂರು ಹಿನ್ನೆಲೆಯಲ್ಲಿ ಹೈವೇ ಇಂಜಿನಿಯರ್ ಗೆ ಕರೆ ಮಾಡಿದ ಶಾಸಕರು ಹೈವೇ ಬದಿಯಲ್ಲಿರುವ ಕೆಸರು ಮಣ್ಣನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.
ರಸ್ತೆ ಬದಿಗೆ ಹಾಕಿರುವ ಮಣ್ಣು ಕೆಸರಿನಂತಾದ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಮತ್ತು ಧ್ವಿಚಕ್ರ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತಗಳೂ ಉಂಟಾಗಿದೆ. ಎರಡು ದಿನದೊಳಗೆ ಸಂಪೂರ್ಣ ಕೆಸರನ್ನು ತೆರವು ಮಾಡುವುದಾಗಿ ಎನ್ ಎಚ್ ಇಂಜಿನಿಯರ್ ಶಾಸಕರಿಗೆ ತಿಳಿಸಿದ್ದಾರೆ.