ಬೆನ್ನು ಮೂಳೆ ಮುರಿತಕ್ಕೊಳಗಾಗಿರುವ ಸುಬ್ರಹ್ಮಣ್ಯದ ಸಾಯಿ ದರ್ಶನ-ಬಾಲಕನ ಬಾಳಿನಲ್ಲಿ ಬೆಳಕು ಮೂಡಲು ಬೇಕಿದೆ ದಾನಿಗಳ ಸಹಾಯ ಹಸ್ತ

0

ಕಡಬ: ಅದೆಷ್ಟೋ ಕನಸುಗಳನ್ನು ಹೊತ್ತು ಇನ್ನೂ ಬಾಳಿ ಬದುಕಬೇಕೆನ್ನುವ ಹಂಬಲವನ್ನಿ ಟ್ಟುಕೊಂಡು,ಎರಡು ವರ್ಷಗಳಿಂದ ಹಾಸಿಗೆ ಹಿಡಿದಿರುವ ಈ ಹುಡುಗನ ಸ್ಥಿತಿ ಕಂಡರೆ ಎಂತಹ ಕಲ್ಲು ಹೃದಯವೂ ಕರಗುತ್ತದೆ, ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿದ್ದ ಈತ ಎಂದಿನಂತೆ ಶಾಲೆ ಬಿಟ್ಟು ತನ್ನ ಸೈಕಲ್ ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ದ ಕುಮಾರಧಾರ ಬಳಿ ಚರಂಡಿಗೆ ಬಿದ್ದು ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಇಂದು ನಡೆದಾಡಲಾಗದ ಸ್ಥಿತಿಯಲ್ಲಿ ಇದ್ದಾರೆ.ಇದೀಗ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈತನ ಹೆಸರು ಸಾಯಿ ದರ್ಶನ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರು ತಿಂಗಳ ಕಾಲ ಚಿಕಿತ್ಸೆ ಪಡೆದು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಕಳೆದ ಎರಡು ವರ್ಷಗಳಿಂದ ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಹಾಸಿಗೆಯಿಂದ ಏಳಲಾಗದೆ, ತನ್ನ ನಿತ್ಯ ಕ್ರಿಯೆಗಳನ್ನೂ ಮಾಡಲಾಗದೆ ತನ್ನ ತಾಯಿಯ ಆಶ್ರಯದಲ್ಲಿ ದಿನ ಕಳೆಯುತ್ತಿರುವ ಸಾಯಿ ದರ್ಶನನ ಯಾತನೆ, ನೋವುಗಳ ಮಧ್ಯೆ ತಂದೆ ತಾಯಿಗೆ ಆರ್ಥಿಕ ಸಂಕಷ್ಟ. ತಮ್ಮಲ್ಲಿದ್ದ ಎಲ್ಲವನ್ನು ತನ್ನ ಓರ್ವ ಮಗನ ಭವಿಷ್ಯಕ್ಕೋಸ್ಕರ ಅರ್ಪಣೆ ಮಾಡಿರುವ ತಂದೆ, ತಾಯಿ ಇದುವರೆಗೆ ಸುಮಾರು 10 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಇನ್ನು ಅವರಲ್ಲಿ ಏನೂ ಉಳಿದಿಲ್ಲ, ಆದರೂ ಮಗನನ್ನು ಹೇಗಾದರೂ ಗುಣಮುಖ ಮಾಡಿಸಬೇಕೆಂಬ ಛಲದಲ್ಲಿರುವ ಹೆತ್ತವರು ಪ್ರಯತ್ನ ಮುಂದುವರಿಸಿ ದ್ದಾರೆ.
ನೋವಿನ ನಡುವೆಯೂ ಹೆತ್ತವರ ನೆರವಿನೊಂದಿಗೆ ಪಿಯುಸಿ ತೇರ್ಗಡೆ ಹೊಂದಿ ಮಲಗಿದಲ್ಲೇ ಕನಸು ಕಾಣುತ್ತಿರುವ ಈತನಿಗೆ ಮತ್ತೆ ಚಿಕಿತ್ಸೆಯ ಅಗತ್ಯದ ಹಿನ್ನಲೆಯಲ್ಲಿ ಜುಲೈ 4ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಗೆ ದಾಖಲಾಗಿದ್ದಾರೆ. ಆದರೆ ಹಣ ಹೊಂದಿಕೆಯಾಗದೆ ಇನ್ನೂ ಸರ್ಜರಿ ನಡೆದಿಲ್ಲ. ಆಯುಷ್ಮಾನ್ ಯೋಜನೆಯ ಪ್ರಯೋಜನ ಸಿಗಬಹುದೆನ್ನುವ ಅವರ ಪ್ರಯತ್ನವೂ ಫಲ ನೀಡಿಲ್ಲ, ಈ ಚಿಕಿತ್ಸೆಗೆ ಆಯುಷ್ಮಾನ್ ಯೋಜನೆಯಲ್ಲಿ ಅವಕಾಶ ಇಲ್ಲ ಎಂದು ತಿಳಿದು ಬಂದಿದೆ.

ಈತನ ತಂದೆ ಶ್ರೀಕಾಂತ ಕುಲಕರ್ಣಿ, ಪತ್ನಿ ಭುವನೇಶ್ವರಿ ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ಇವರು ಸುಬ್ರಹ್ಮಣ್ಯದಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಕ್ರಿಯಾ ಕರ್ತೃ ಆಗಿ ದುಡಿಯುತ್ತಿರುವ ಈ ಬಡ ಕುಟುಂಬ ಮಗನ ಚಿಕಿತ್ಸಾ ವೆಚ್ಚಕ್ಕಾಗಿ ಸಹೃದಯಿ ದಾನಿಗಳ ಆರ್ಥಿಕ ಸಹಾಯನ್ನು ಯಾಚಿಸಿದ್ದಾರೆ.

ಸಹಾಯ ಮಾಡಲು ಇಚ್ಚಿಸುವವರು ನೇರವಾಗಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಕೆಳಗಿನ ಬ್ಯಾಂಕ್ ಖಾತೆಗೆ ನೀಡಬೇಕಾಗಿ ಅವರು ಮನವಿ ಮಾಡಿದ್ದಾರೆ.

Name: Bhuvaneshwari s kulkarni,
Account number: no:40531891823,
IFSC Code: SBIN0040951,
Branch :subramanya,
Bank:State bank of India

Mobile Number : 8105129632.
Phone pe number:8105129632

LEAVE A REPLY

Please enter your comment!
Please enter your name here