ಸಂಚಾಲಕ: ರಕ್ಷಿತ್ ರೈ , ಅಧ್ಯಕ್ಷ: ಉಮೇಶ್ ಕುಮಾರ್, ಕಾರ್ಯದರ್ಶಿ: ನಝೀರ್ ಪಿ, ಕೋಶಾಧಿಕಾರಿ: ವಿಶ್ವನಾಥ ರೈ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಹಳೆ ವಿದ್ಯಾರ್ಥಿ ಸಂಘ ರಚನಾ ಸಭೆಯು ಜು.9 ರಂದು ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರುರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಸರಕಾರದ ಸುತ್ತೋಲೆಯಂತೆ ಕುಂಬ್ರ ಶಾಲೆಯ ನೂತನ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಉಮೇಶ್ ಕುಮಾರ್ ಬರೆಮೇಲು, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪಿ.ಪರ್ಪುಂಜ, ಕೋಶಾಧಿಕಾರಿಯಾಗಿ ವಿಶ್ವನಾಥ ರೈ ಕೋಡಿಬೈಲು, ಸಾಂಸ್ಕೃತಿಕ ಸಂಘಟಕರಾಗಿ ಸುಂದರ ರೈ ಮಂದಾರ, ಸಂಚಾಲಕರಾಗಿ ರಕ್ಷಿತ್ ರೈ ಮುಗೇರು, ಉಪಾಧ್ಯಕ್ಷರಾಗಿ ಶೇಖರ ರೈ ಕುರಿಕ್ಕಾರ, ಜತೆ ಕಾರ್ಯದರ್ಶಿಗಳಾಗಿ ಲೀಲಾವತಿ ಉರ್ವ, ಮೀನಾಕ್ಷಿ ಕೋಡಿಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನ ಬಿಜಲ, ಚಿನ್ನಯ್ಯ ಆಚಾರ್ಯ ಮತ್ತು ಹುಕ್ರ ಬೊಳ್ಳಾಡಿ, ಕಾರ್ಯಕಾರಿ ಸದಸ್ಯರುಗಳಾಗಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯ ವಿನೋದ್ ಶೆಟ್ಟಿ ಮುಡಾಲ, ರಝಾಕ್ ಪರ್ಪುಂಜ, ಅಬ್ದುಲ್ಲಾ ಕುಂಬ್ರ, ಅಣ್ಣು ಬಿಜಳ, ಕುಂಞ ಕುಂಬ್ರ, ಗೌರವ ಸಲಹೆಗಾರರಾಗಿ ಕುಂಬ್ರ ದುರ್ಗಾಪ್ರಸಾದ್ ರೈ, ಅಶೋಕ್ ಪೂಜಾರಿ ಬೊಳ್ಳಾಡಿರವರುಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಉಸ್ತುವಾರಿಯಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯನಿರ್ವಹಿಸಿದ್ದರು. ಅಧಿಕಾರ ಸ್ವೀಕಾರ ಮಾಡಿದ ಅಧ್ಯಕ್ಷ ಉಮೇಶ್ ಕುಮಾರ್‌ರವರು ಎಲ್ಲರ ಸಹಕಾರ ಕೋರಿದರು. ಶಾಲೆಯ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಸದಸ್ಯತ್ವವನ್ನು ಪಡೆದು ಮುಂದಿನ ದಿನಗಳಲ್ಲಿ ಸಭೆ ಕರೆಯುವುದು ಎಂದು ನಿರ್ಣಯಿಸಲಾಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು. ಮೊದಲ ಸದಸ್ಯತ್ವವನ್ನು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು ಪಡೆದುಕೊಂಡರು. ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪಿ.ವಂದಿಸಿದರು.