ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ 2023-2024ನೇ ಸಾಲಿನ ಐದನೇ ತರಗತಿ ವಿದ್ಯಾರ್ಥಿಗಳು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಕೊಡುಗೆ ನೀಡಿದ ಕುಡಿಯುವ ನೀರಿನ ಘಟಕ ಹಾಗೂ ಶಿವನ್ ಮತ್ತು ಅವರ ಪೋಷಕರು ಕೊಡುಗೆ ನೀಡಿದ ಧ್ವನಿವರ್ಧಕದ ಉದ್ಘಾಟನೆಯು ನಡೆಯಿತು.
ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಕೊಂಡಾಡಿಯವರು ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಲು ಇಂತಹ ಕೊಡುಗೆಗಳನ್ನು ನೀಡಲು ದಾನಿಗಳು ಮನಸ್ಸು ಮಾಡಬೇಕು ಎಂದು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತಾ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಕೆ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಕಮಿತ್ತಿಲು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಪೂರ್ವಾಧ್ಯಕ್ಷ ಶೀನಪ್ಪ ಕುಂಬಾರ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಲತಾ ಶರವೂರು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ಕೆ ದಿವಾಕರ ಕುಂಬಾರ, ದಾನಿಗಳಾದ ನೋಣಯ್ಯ ಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹರೀಶ್ ಗೌಡ ಏಂತಡ್ಕ, ಲೀಲಾವತಿ, ವೇದಾವತಿ,ಪ್ರೇಮಾವತಿ,ರೇವತಿ, ರತ್ನಾವತಿ, ಸುನೀತಾ ಅಡುಗೆ ಸಿಬ್ಬಂದಿ ಯಶೋಧ ಶಾಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಜಯಂತ ವೈ ಸ್ವಾಗತಿಸಿ ಸಹಶಿಕ್ಷಕಿ ದಿವ್ಯಾ ವಿ ವಂದಿಸಿದರು. ಸಹಶಿಕ್ಷಕಿ ಸೌಮ್ಯ ನಿರೂಪಿಸಿದರು.