ಸುದಾನದಲ್ಲಿ ಶಾಲಾ ಸಂಘಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ಸಂಸತ್ತಿನ ಪ್ರಮಾಣ ವಚನ ಸಮಾರಂಭ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಚುನಾಯಿತ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಜು.8ರಂದು ನಡೆಯಿತು.

ವಿವೇಕಾನಂದ ಕಾಲೇಜಿನ ಇಕನಾಮಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್ ದೀಪೋಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಭೌತಿಕ ಪ್ರಗತಿಯಷ್ಟೇ ಮುಖ್ಯವಲ್ಲ ಅವರಲ್ಲಿ ಮಾನವೀಯ ಮೌಲ್ಯಗಳೂ ಜಾಗೃತವಾಗಬೇಕು. ದೇಶದ ಅಭಿವೃದ್ಧಿಗೆ ಸಂವೇದನಾಶೀಲರಾಗಿ ಸ್ಪಂದಿಸುವ ನೈತಿಕ ಆದರ್ಶಗಳನ್ನು ಉಸಿರನ್ನಾಗಿಸಿಕೊಂಡ ಯುವ ಜನತೆಯನ್ನು ರೂಪಿಸುವುದು ಶಿಕ್ಷಣದ ಗುರಿಯಾಗಬೇಕು ಎಂದರು.


ನೂತನ ಶೈಕ್ಷಣಿಕ ವರ್ಷದಲ್ಲಿ ಚುನಾಯಿತರಾದ ವಿದ್ಯಾರ್ಥಿ ಶಾಸಕರಿಗೆ ಶಾಲಾಮುಖ್ಯ ಗುರು ಶೋಭಾ ನಾಗರಾಜ್ ರವರು ಪ್ರಮಾಣ ವಚನವನ್ನು ಬೋಧಿಸಿದರು. ವಿದ್ಯಾರ್ಥಿ ನಾಯಕ ಅನೀಶ್ ಎಲ್ ರೈ(10ನೇ), ಉಪ ವಿದ್ಯಾರ್ಥಿ ನಾಯಕಿ ಖದೀಜಾ ಅಫ್ನಾ(10ನೇ) ವಿದ್ಯಾಥಿ ಕಾರ್ಯದರ್ಶಿ ಅದ್ವಿಜ್ ಸಜೇಶ್ (9ನೇ), ವಿರೋಧ ಪಕ್ಷದ ನಾಯಕಿ ಅವನಿ ರೈ (10ನೇ) ತಮ್ಮ ಯೋಜನೆ, ಯೋಚನೆಗಳನ್ನು ಪ್ರತಿಪಾದಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ರವರು ಮಾತನಾಡಿ ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಎಲ್ಲಾ ಕಾರ್ಯಗಳನ್ನು ಮಾಡಬೇಕು ಎಂದು ಶುಭ ಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಕಬ್ಬಿಣದ ಸರಳನ್ನು ಕೈಯಿಂದ ಬಗ್ಗಿಸಿ ನಾಶಮಾಡಲು ಸಾಧ್ಯವಿಲ್ಲ. ಆದರೆ ಅದಕ್ಕೆ ಅದರದ್ದೇ ತುಕ್ಕು ಹಿಡಿದರೆ ನಾಶವಾಗಬಹುದು. ಹಾಗೆಯೇ ವಿದ್ಯಾರ್ಥಿಯು ಸತ್ವಯುತನಾಗಿದ್ದರೆ, ಮಾನಸಿಕ ದೃಢತೆಯನ್ನು ಹೊಂದಿದ್ದರೆ ಸೋಲಲು ಸಾಧ್ಯವಿಲ್ಲ. ಸೋಮಾರಿತನವನ್ನು ರೂಢಿಸಿಕೊಂಡರೆ ಸೋಲುವುದು ಖಂಡಿತಾ ಎಂದರು.

ಪ್ರತಿಭಾ ಸಂಘದ ಕುರಿತು ಸಹಶಿಕ್ಷಕಿ ಬಕುಳಾ, ಲಹರಿ ಸಾಹಿತ್ಯ ಸಂಘದ ಕುರಿತು ಸುವರ್ಣ, ಜಾಗೃತಿ ಸೋಶಿಯಲ್ ಕ್ಲಬ್ ಕುರಿತು ಸವಿತಾ, ಅವನಿ ವಿಜ್ಞಾನ ಸಂಘದ ಕುರಿತು ರಂಜಿತಾ, ದೃಷ್ಟಿ ಐಟಿ ಕ್ಲಬ್ ನ ಕುರಿತು ರಂಜಿತ್ ಮಥಾಯಿಸ್, ಇಂಟ್ಯರ‍್ಯಾಕ್ಟ್ ಕ್ಲಬ್ ಸ್ಪಂದನಾದ ಕುರಿತು ಗ್ಲಾಡಿಸ್ ವಿವರಿಸಿದರು.


ಸುದಾನ ಭಿತ್ತಿ ಪತ್ರಿಕೆ ವಾಯ್ಸ್ ಆಫ್ ಸುದಾನವನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ಕೋಶಾಧಿಕಾರಿ ರೊ. ಆಸ್ಕರ್ ಆನಂದ್ ರವರು ಶುಭ ಹಾರೈಸಿದರು. ಜಾಗೃತಿ ಸೋಶಿಯಲ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ಶ್ರದ್ಧಾ ಸ್ವಾಗತಿಸಿ, ಮಹಮ್ಮದ್ ಶಾಝ್ ವಂದಿಸಿದರು. ಸಹಶಿಕ್ಷಕರಾದ ಹೇಮಲತಾ ರೈ, ರೀನಾ ಅಲೆಕ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಶರ್ವಿನಾ ಶೆಟ್ಟಿ ಇವರಿಂದ ನೃತ್ಯಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಶಾಲಾ ಸೋಶಿಯಲ್ ಕ್ಲಬ್ ಜಾಗೃತಿ ಆಯೋಜಿಸಿತ್ತು.

LEAVE A REPLY

Please enter your comment!
Please enter your name here