ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ, ಬೆದರಿಕೆ ಆರೋಪ – ಶಾಸಕ ಭರತ್ ಶೆಟ್ಟಿ ವಿರುದ್ಧ ಯುವ ಕಾಂಗ್ರೆಸ್ ನಿಂದ ಪುತ್ತೂರಿನಲ್ಲಿ ಪೊಲೀಸರಿಗೆ ದೂರು

0

ಪುತ್ತೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಹಲ್ಲೆ ಮಾಡುವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಪುತ್ತೂರು ಯುವ ಕಾಂಗ್ರೆಸ್ ನಿಯೋಗ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರ ವಿರುದ್ದ ಪ್ರಕರಣ ದಾಖಲಿಸುವಂತೆ ಪುತ್ತೂರು ಪೊಲೀಸರಿಗೆ ದೂರು‌ ನೀಡಿದ್ದಾರೆ.


ಜು.9 ರಂದು ಯುವ ಕಾಂಗ್ರೆಸ್ ನ ಪುತ್ತೂರು ಬ್ಲಾಕ್ ಸಮಿತಿಯ ಕಾರ್ಯಕರ್ತರು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರ ನೇತೃತ್ವದಲ್ಲಿ ಪುತ್ತೂರು ನಗರ ಪೋಲಿಸ್ ಸ್ಟೆಷನ್ ಗೆ ತೆರಳಿದ ಪ್ರಮುಖರು ದೂರು ನೀಡಿದ್ದಾರೆ.


ಭಾರತ ದೇಶದ ಪ್ರಮುಖ ಸಂವಿಧಾನಿಕ ಹುದ್ದೆಯಾದ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವ ಸಂಸದರಾಗಿರುವ ರಾಹುಲ್ ಗಾಂಧಿ ಅವರ ವಿರುದ್ಧ ಪ್ರತಿಭಟಿಸುವ ಭರದಲ್ಲಿ ಅವರಿಗೆ ಸಂಸತ್ತಿನ ಒಳಗೆ ಹೋಗಿ ಕೆಪ್ಪೆಗೆ ಬಾರಿಸಬೇಕು ಜೊತೆಗೆ ಸಮಯ ಬಂದಾಗ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಬೇಕು ಎಂದು ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ ಅವರು ಬಿ ಜೆ ಪಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರದ ಭಾಗವಾಗಿದ್ದು, ಒಬ್ಬ ಕಾನೂನು ರೂಪಿಸುವ ಅಧಿಕಾರವುಳ್ಳ ಶಾಸಕನಾಗಿ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ಅಗೌರವ ತೋರಿಸುವುದರ ಜೊತೆಗೆ ಗರಿಷ್ಠ ಭದ್ರತೆಯುಳ್ಳ ಸಂಸತ್ತಿನ ಭದ್ರತೆಯ ಹಾಗೂ Z+ ಭದ್ರತಾ ವ್ಯವಸ್ಥೆ ಹೊಂದಿರುವ ವಿರೋಧ ಪಕ್ಷದ ನಾಯಕನ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಗೃಹ ಇಲಾಖೆಯ ಕಾರ್ಯಕ್ಷಮತೆಯನ್ನೇ ಅಣಕಿಸುವಂತಿದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿರುವ ಶಾಸಕ ಭರತ್ ಶೆಟ್ಟಿ ಅವರ ವಿರುದ್ಧ ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕಾಗಿ ತಮ್ಮಲ್ಲಿ ವಿನಂತಿ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಈ ಸಂದರ್ಭ ಜಿಲ್ಲಾ ಯುವಕಾಂಗ್ರೆಸ್ ಪ್ರ.ಕಾರ್ಯದರ್ಶಿ ಬಶೀರ್ ಪರ್ಲಡ್ಕ, ವಿಟ್ಲ ಉಪ್ಪಿನಂಗಡಿ ಯುವಕಾಂಗ್ರೆಸ್ ಅಧ್ಯಕ್ಷರು ಫಾರೂಕ್ ಪರ್ನೆ, ನಗರ ಯುವಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಜಿಲ್ಲಾ ಯುವಕಾಂಗ್ರೆಸ್ ಕಾರ್ಯದರ್ಶಿ ರಂಜಿತ್ ಬಂಗೇರ, ಕಮಲೇಶ್ ಸರ್ವೇದೋಳಗುತ್ತು, ಹನೀಫ್ ಪುಂಚತ್ತಾರ್, ಅಮರ್ ಗೌಡ ಬಪ್ಪಳಿಗೆ, ಸಿಯಾನ್ ದರ್ಬೆ, ಜಲೀಲ್ ಬಲ್ನಾಡ್, ಇಮ್ತೀಯಾಜ್ ಬಪ್ಪಳಿಗೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ದಿನೇಶ್ ಯಾದವ್, ರಶೀದ್ ಮುರ, ಅಭಿಷೇಕ್ ಆಚಾರ್ಯ, ಜಯಂತ್ ಕಲ್ಲೆಗ, ಶಾಹಲ್ ಪರ್ನೆ, ಗಂಗಾಧರ್ ಶೆಟ್ಟಿ ಎಲಿಕ, ಚಂದ್ರ ಕಲ್ಲೆಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here