ಬನ್ನೂರು: ಆರೋಗ್ಯ ಕ್ಷೇಮ‌ ಕೇಂದ್ರ ಉದ್ಘಾಟನೆ

0

ಜನರು ಆರೋಗ್ಯದ ಕಡೆ ಹೆಚ್ಚು ಒಲವು ಹೊಂದಿರಬೇಕು: ಶಾಸಕ ಅಶೋಕ್ ರೈ


ಪುತ್ತೂರು: ಜನರ ಆರೋಗ್ಯಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಮಾಡುತ್ತಿದೆ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು‌ ಮತ್ತು ಆರೋಗ್ಯದ ವಿಚಾರದಲ್ಲಿ ಹೆಚ್ಚು ಒಲವು ಹೊಂದಿರಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಬನ್ನೂರು ಕಜೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ‌ ಮಾತನಾಡಿದರು.


ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ‌ ಕರ್ನಾಟಕ ಸರಕಾರ ಸರಕಾರಿ‌ ಆಸ್ಪತ್ರೆ ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ‌ ಎಲ್ಲಾ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ವೈದ್ಯರುಗಳನ್ನು‌ ನೇಮಕ‌ ಮಾಡುವ ಮೂಲಕ ವೈದ್ಯರು ಮತ್ತು ಔಷಧಿ ಕೊರತೆಯನ್ನು ಪರಿಹರಿಸಿದೆ. ಸರಕಾರಿ ಆಸ್ಪತ್ರೆಗಳು ಈಗ‌ ಮೊದಲಿನಂತಿಲ್ಲ ಸಾಕಷ್ಟು ಬದಲಾವಣೆಯಾಗಿದೆ ಎಂದು ಶಾಸಕರು ಹೇಳಿದರು.


ನೂತನವಾಗಿ ಆರಂಭಗೊಂಡ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಮಹಿಳೆಯರ, ಗರ್ಭಿಣಿಯರ‌ ಮತ್ತು ಮಾರಕ‌ ಕಾಯಿಲೆ ಹೊಂದಿರುವ ರೋಗಿಗಳಿಗೆ ಮಾಹಿತಿ‌ ಮತ್ತು‌ ಔಷಧಿಯನ್ನು‌ ನೀಡಲಾಗುತ್ತದೆ. ಪ್ರತೀ ಹಳ್ಳಿಯಲ್ಲೂ ಈ‌ ರೀತಿ ಸೇವೆ ಒದಗಿಸಲು ಸರಕಾರದ‌ ಮಟ್ಟದಲ್ಲಿ‌ ಚರ್ಚೆ ನಡೆಯುತ್ತಿದೆ ಎಂದು‌ ಶಾಸಕರು ಹೇಳಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.‌ದೀಪಕ್ ರೈ‌ ಮಾತನಾಡಿ ಸ್ಥಳೀಯ ಎಲ್ಲರೂ ಇದರ ಪ್ರಯೋಜನ‌ ಪಡೆದುಕೊಳ್ಳುವಂತೆ‌ ಮನವಿ ಮಾಡಿದರು.
ವೇದಿಕೆಯಲ್ಲಿ ಬನ್ನೂರು ಗ್ರಾಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ‌ ಮೂಲ್ಯ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಧ್ಯಾಧಿಕಾರಿ ಡಾ. ಕೃಷ್ಣಾನಂದ, ಪಿಡಿಒ ಚಿತ್ರಾ,ಉದ್ಯಮಿ‌ ಡೆನ್ನಿಸ್ ಮಸ್ಕರೇನಸ್, ಕಟ್ಟಡ‌ ಮಾಲಿಕ ತಿಮ್ಮಣ್ಣ ಕಜೆ, ರತ್ನಾಕರ ಪ್ರಭು, ಗ್ರಾಪಂ ಸದಸ್ಯ ಸುಪ್ರಿತ್, ಸೌಮ್ಯ ಗ್ರಾಮ ಆರೋಗ್ಯ ಅಧಿಕಾರಿ, ಆರೋಗ್ಯ ಸಂರಕ್ಷಣಾಧಿಕಾರಿ ದಮಯಂತಿ,ಆಶಾ ಕಾರ್ಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here