ಕಡಬ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಬಳಿ ಒಮ್ಮಿ ಕಾರೊಂದು ನಿಯಂತ್ರಣ ತಪ್ಪಿಮರಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ನುಗ್ಗಿದ್ದು ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಜುಲೈ 9 ರ ಸಂಜೆ ನಡೆದಿದೆ.
ಮರ್ದಾಳಸಮೀಪದ ನೆಕ್ಕಿತ್ತಡ್ಕ ಬಳಿ ಈ ಘಟನೆ ನಡೆದಿದೆ. ಚಾಲಕ ಕೊಡಿಂಬಾಳ ಗ್ರಾಮದ ಕೊಡಂಕೇರಿಯ ದಾಮೋದರ ಗೌಡ ಎಂಬವರು ಚಲಾಯಿಸುತ್ತಿದ್ದ ಒಮ್ಮಿ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿದೆ. ರಸ್ತೆ ಬದಿಯ ತೋಟಕ್ಕೆ ನುಗ್ಗಿ ತೆಂಗಿನ ಮರಕ್ಕೆ ಗುದ್ದಿ ನಿಂತಿದೆ. ಒಮ್ಮಿಯಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದ್ದು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮ್ಮಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳೀಯರು ಮತ್ತು ವಾಹನ ಸವಾರರು ವಾಹನವನ್ನು ಮೇಲಕ್ಕೆತ್ತಲು ಸಹಕರಿಸಿದ್ದಾರೆ.