ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಪುತ್ತೂರು ಸಮಿತಿ ವತಿಯಿಂದ ಮಾಸಿಕ ಸಭೆ ಪುತ್ತೂರು ವಿಮ್ ಅಧ್ಯಕ್ಷೆ ಝಹಿದಾ ಸಾಗರ್ ನೇತೃತ್ವದಲ್ಲಿ ನಡೆಯಿತು. ‘ಘನತೆಯ ಸಮಾಜಕ್ಕೆ ಒಂದಾಗೋಣ’ ಸದಸ್ಯತ್ವ ಅಭಿಯಾನಕ್ಕೆ ಹೊಸ ಸದಸ್ಯರನ್ನು ವಿಮ್‌ಗೆ ಸೇರ್ಪಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಮ್‌ಗೆ ಹೊಸದಾಗಿ ಸೇರ್ಪಡೆಯಾದ ಆಫೀಝ ಮತ್ತು ಮೆಹರುನ್ನಿಸಾ ಆತೂರ್‌ರವರ ಸಮ್ಮುಖದಲ್ಲಿ ಸದಸ್ಯತ್ವ ಅಭಿಯಾನದ ಕರ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ವಿಮ್ ಅಧ್ಯಕ್ಷೆ ಝಹಿದಾ ಸಾಗರ್ ಮಾತನಾಡಿ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದರೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಲಿಂಗ ತಾರತಮ್ಯ ನಡೆಯುತ್ತಿದೆ. ನ್ಯಾಯಾಯುತವಾದ ಹೋರಾಟ ಮಾಡಲು ಅನುಮತಿ ಕೊಡದೆ ಸತಾಯಿಸಿ ಮಹಿಳೆಯರ ಮೇಲೆಯೇ ಕೇಸುಗಳನ್ನು ಹಾಕುವ ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ರಾಜಕೀಯದಲ್ಲಿ ಶಕ್ತಿಯುತವಾಗಿ ಬೆಳೆಯಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ವಿಮ್ ಬೆಳವಣಿಗೆ ಅಗತ್ಯವಿದ್ದು ಅದಕ್ಕಾಗಿ ಹೆಚ್ಚು ಸದಸ್ಯರನ್ನು ಸೇರಿಸುವ ಕಾರ್ಯ ಆಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮ್ಮೂಮೆಂಟ್ (ವಿಮ್) ಪುತ್ತೂರು ಅಸೆಂಬ್ಲಿ ಉಪಾಧ್ಯಕ್ಷರಾದ ಝರೀನಾ, ಕಾರ್ಯದರ್ಶಿ ಸೌದ, ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ, ಕೊಶಾದಿಕಾರಿ ಫಾಹಿನ ಮತ್ತು ಕ್ಷೇತ್ರ ಸಮಿತಿಯ ಸದಸ್ಯರಾದ ನುಶ್ರತ್, ಮುಂತಾಜ್ ಹಾಗೂ ನಫೀಸ ಮಠ, ನಸೀಮ ಕೆ ಎಂ, ಅಸ್ಮ, ಪೌಝಿಯಾ ಉಪಸ್ಥಿತರಿದ್ದರು. ಸೌದ ಸ್ವಾಗತಿಸಿ ಝರೀನ ವಂದಿಸಿದರು.