ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರೋಟರಿ ಯಶಸ್ವಿ-ರಂಗನಾಥ್ ಭಟ್
ಪುತ್ತೂರು:ಸ್ಪರ್ಧಾತ್ಮಕ ಯುಗದಲ್ಲಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ರೋಟರಿಯು ಪೋಲಿಯೋ ನಿರ್ಮೂಲನೆಯಂತಹ ಯಾವುದೇ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ರೋಟರಿ ಸದಸ್ಯರು ರೋಟರಿ ಫೌಂಡೇಶನ್‌ಗೆ ಟಿ.ಆರ್.ಎಫ್ ಮುಖೇನ ನೀಡಿದ ದೇಣಿಗೆಯಿಂದ ದೊಡ್ಡ ಪ್ರಾಜೆಕ್ಟ್‌ಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರೋಟರಿ ಪಿಡಿಜಿ ರಂಗನಾಥ ಭಟ್ ರವರು ಹೇಳಿದರು.
ಜು.9 ರಂದು ಪರ್ಲಡ್ಕ-ಬೈಪಾಸ್ ಆಶ್ಮಿ ಕಂಫರ್ಟ್‌ನಲ್ಲಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು.
ಕ್ಲಬ್ ಡೈಮಂಡ್ ಕ್ಲಬ್ ಆಗಿ ಪ್ರಖ್ಯಾತಿ ಹೊಂದಲಿ-ಸೂರ್ಯನಾಥ ಆಳ್ವ:
ರೋಟರಿ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವರವರು ಮಾತನಾಡಿ, ರೋಟರಿ ಸೆಂಟ್ರಲ್ ಕ್ಲಬ್‌ನಲ್ಲಿ ಬಹಳಷ್ಟು ಜ್ಞಾನಿಗಳಿದ್ದು ಕ್ಲಬ್ ಬೆಳೆಯುತ್ತಿದೆ. ರೋಟರಿಯಲ್ಲಿ ಎಲ್ಲರೂ ಸಮಾನರು. ಇಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ ಮಾತ್ರ. ರೋಟರಿ ಸ್ವರ್ಣದಿಂದ ಪ್ರಾಯೋಜಿಸಲ್ಪಟ್ಟ ಈ ಕ್ಲಬ್ ಡೈಮಂಡ್ ಕ್ಲಬ್ ಆಗಿ ಪ್ರಖ್ಯಾತಿ ಹೊಂದಲಿ ಎಂದರು.
ಪ್ರಪಂಚದಲ್ಲಿ ಗುರುತಿಸುವ ಪ್ರಜೆಯಾಗಿ ರೋಟರಿ ಬೆಳೆಸುತ್ತದೆ-ಮೊಹಮದ್ ರಫೀಕ್:
ರೋಟರಿ ವಲಯ ಸೇನಾನಿ ಮೊಹಮ್ಮದ್ ರಫೀಕ್ ದರ್ಬೆರವರು ಸನತ್ ರೈ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಪ್ರಪಂಚದಲ್ಲಿ ಗುರುತಿಸುವ ಪ್ರಜೆಯಾಗಿ ರೋಟರಿ ಬೆಳೆಸುತ್ತದೆ, ಊರಿನ ಅಭಿವೃದ್ಧಿಗೆ ಒಳ್ಳೆಯ ವ್ಯವಸ್ಥೆಯನ್ನು ಮಾಡಿದಾಗ ರೋಟರಿ ಅದನ್ನು ಉಳಿಸುವ ಕೆಲಸ ಮಾಡುತ್ತದೆ ಮಾತ್ರವಲ್ಲ ಫಲಾನುಭವಿಗಳಿಗೆ ರಕ್ಷಣೆ ನೀಡುವ ಕಾರ್ಯ ಮಾಡುತ್ತದೆ ಎಂದರು.
ಸವಾಲುಗಳನ್ನು ಅವಕಾಶವೆಂದು ಸ್ವೀಕರಿಸಬೇಕು-ಡಾ.ರಾಜೇಶ್ ಬೆಜ್ಜಂಗಳ:
ನಿರ್ಗಮಿತ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಮಾತನಾಡಿ, ಕ್ಲಬ್‌ನ ಐದನೇ ಅಧ್ಯಕ್ಷನಾಗಿ ಜವಾವ್ದಾರಿ ವಹಿಸಿಕೊಂಡಾಗ ಯಾವುದೇ ಆತಂಕ ಇರಲಿಲ್ಲ, ಮುಂದುವರೆದಾಗ ಗೊಂದಲವೂ ಇರಲಿಲ್ಲ, ಬಿಟ್ಟುಕೊಡುವಾಗ ಬೇಸರವೂ ಇಲ್ಲ. ರೋಟರಿಯಲ್ಲಿನ ಪರಿಮಿತಿಯಲ್ಲಿ ಒಂದಷ್ಟು ಯೋಚನೆಗಳನ್ನು ಕ್ಲಬ್ ಸದಸ್ಯರ ಸಹಕಾರದಲ್ಲಿ ಮಾಡಿರುತ್ತೇನೆ. ನಾವು ಸವಾಲುಗಳನ್ನು ಅವಕಾಶ ಎಂದು ಸ್ವೀಕರಿಸಬೇಕು ಎಂದರು.
ಸಮಾಜಮುಖಿ ಕಾರ್ಯಗಳೊಂದಿಗೆ ಮ್ಯಾಜಿಕ್ ಮಾಡುವವರಾಗಿ-ಸುರೇಶ್ ಪಿ:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಮಾತನಾಡಿ, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಬೆಜ್ಜಂಗಳರವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ಹಮ್ಮಿಕೊಂಡಿರುವುದು ಶ್ಲಾಘನೀಯ. ಪ್ರಸ್ತುತ ವರ್ಷದ ಅಧ್ಯಕ್ಷ ಸುರೇಶ್ ಪಿ.ರವರ ನೂತನ ತಂಡ ಅಂತರ್ರಾಷ್ಟ್ರೀಯ ಅಧ್ಯಕ್ಷರ ಧ್ಯೇಯವಾಕ್ಯವಾದ ಮ್ಯಾಜಿಕ್ ಆಫ್ ರೋಟರಿಯಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮ್ಯಾಜಿಕ್ ಮಾಡುವವರಾಗಿ ಎಂದರು.
ನೂತನ ಸದಸ್ಯ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಸೌಹಾರ್ದ ಸಹಕಾರಿ ಫ್ರೆಟರ್ನಿಟಿಯ ವಸಂತ್ ನಾಯಕ್ ಅಜೇರುರವರನ್ನು ಪಿಡಿಜಿ ರಂಗನಾಥ ಭಟ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಜೊತೆ ಕಾರ್ಯದರ್ಶಿ ನವ್ಯಶ್ರೀ ನಾಕ್‌ರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ರಕ್ತದಾನಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹೇಶ್ಚಂದ್ರ ಸಾಲಿಯಾನ್(64 ಬಾರಿ), ಜಯಪ್ರಕಾಶ್ ಅಮೈ(54 ಬಾರಿ), ಸಂತೋಷ್ ಶೆಟ್ಟಿ(50 ಬಾರಿ), ಪ್ರದೀಪ್ ಪೂಜಾರಿ(19 ಬಾರಿ)ರವರುಗಳನ್ನು ಅಸಿಸ್ಟೆಂಟ್ ಗವರ್ನರ್‌ರವರು ಗೌರವಿಸಿದರು.
ಕ್ಲಬ್ ಆನೆಟ್‌ಗೆ ಅಭಿನಂದನೆ:
2023-24ರ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಕ್ಲಬ್ ಮಾಜಿ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆರವರ ಪುತ್ರಿ ಫಾತಿಮತ್ ಆಶ್ಮೀಲರವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ರೋಟರಿಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಸಂತೋಷ್ ಶೆಟ್ಟಿ, ನವೀನ್ ಚಂದ್ರ ನಾಕ್, ಡಾ.ರಾಜೇಶ್ ಬೆಜ್ಜಂಗಳ, ಮೊಹಮ್ಮದ್ ರಫೀಕ್ ದರ್ಬೆ, ಚಂದ್ರಹಾಸ ರೈ ಬಿ.ರವರುಗಳನ್ನು ಗೌರವಿಸಲಾಯಿತು.
ಪುಟಾಣಿಗಳು ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ನೂತನ ಕಾರ್ಯದರ್ಶಿ ಬಿ.ವಸಂತ್ ಶಂಕರ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಡಾ.ರಾಮಚಂದ್ರ ಕೆ.ರವರು ವರದಿ ಮಂಡಿಸಿದರು. ರಮೇಶ್ ರೈ ಬೋಳೋಡಿ, ಪ್ರದೀಪ್ ಬೊಳ್ವಾರು, ಸನತ್ ರೈ, ಅಮಿತ ಶೆಟ್ಟಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಮೋದ್ ಕುಮಾರ್ ಕೆ, ಚಂದ್ರಹಾಸ ರೈ ಬಿ, ಡಾ.ನಮಿತಾ ನಾಕ್, ಜಗನ್ನಾಥ ಅರಿಯಡ್ಕರವರು ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಲೋಕೇಶ್ ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕ ಜಗನ್ನಾಥ್ ಅರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಭಾರತಿ ಎಸ್.ರೈ ಹಾಗೂ ಚಂದ್ರಹಾಸ ರೈ ಬಿ.ರವರು ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರ ಅಲ್ಲ ಜವಾಬ್ದಾರಿ..
ಕ್ಲಬ್ ನ ಆರನೇ ಅಧ್ಯಕ್ಷನಾಗಿ ಸೇವೆ ಮಾಡಲು ಸದಸ್ಯರು ಅವಕಾಶ ನೀಡಿದ್ದು ಈ ಅವಕಾಶವನ್ನು ಪ್ರೀತಿ ಹಾಗೂ ಗೌರವದಿಂದ ಸ್ವೀಕರಿಸಿದ್ದೇನೆ. ಇದು ಅಧಿಕಾರ ಅಲ್ಲ ಜವಾಬ್ದಾರಿ ಎಂದು ಭಾವಿಸಿ ಕ್ಲಬ್ ಅನ್ನು ಸಮರ್ಥವಾಗಿ ನಿಭಾಯಿಸಲು ಕ್ಲಬ್‌ನ ಹಿರಿ-ಕಿರಿಯ ಸದಸ್ಯರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಅಂತರ್ರಾಷ್ಟ್ರೀಯ ರೋಟರಿಯ ಉದ್ಧೇಶವನ್ನು ಅರಿತುಕೊಂಡು, ಜಿಲ್ಲಾ ಗವರ್ನರ್‌ರವರ ಆಶಯದೊಂದಿಗೆ ಕ್ಲಬ್ ಅನ್ನು ಮುನ್ನೆಡೆಸಲು ಸನ್ನದ್ಧನಾಗಿದ್ದೇನೆ.
-ಪಿ.ಎಂ ಅಶ್ರಫ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್
ಸೇವಾ ಕೊಡುಗೆ:
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ಅಂಗನವಾಡಿಗಳ ಅಭಿವೃದ್ಧಿಗೆ ಚೇರ್‌ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಪ್ರದೀಪ್ ಪೂಜಾರಿರವರು ಪಿಡಿಜಿ ರಂಗನಾಥ್ ಭಟ್‌ರವರಿಂದ ಚೇರ್‌ಗಳನ್ನು ಸ್ವೀಕರಿಸಿದರು. ಯೂತ್ ಸರ್ವಿಸ್‌ನಡಿಯಲ್ಲಿ ಕ್ಲಬ್ ಸದಸ್ಯ, ಕೊರೋನಾ ಸಂದರ್ಭದಲ್ಲಿ ಅಗಲಿದ ಡೆಪ್ಯುಟಿ ತಹಶೀಲ್ದಾರ್ ಶ್ರೀಧರ್ ಕೋಡಿಜಾಲುರವರ ಸ್ಮರಣಾರ್ಥ ಆರಂಭಿಸಿರುವ ಧತ್ತಿನಿಧಿಯ ಮೂಲಕ ಮಂಗಳೂರು ಶ್ರೀನಿವಾಸ್ ಕಾಲೇಜಿನ ಮಹಮದ್ ಹಫೀಸ್, ಕೊಂಬೆಟ್ಟು ಎಸೆಸ್ಸೆಲ್ಸಿ ವಿದ್ಯಾರ್ಥಿ ಜಾನವಿ, ಭುವನ ಗಡಿಯಾರ, ಪ್ರೀತೇಶ್ ಶೆಟ್ಟಿ, ಮುಕ್ವೆ ಸರಕಾರಿ ಶಾಲೆಯ ಆಯಿಷಾ ನಿಧಾರವರಿಗೆ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಸನ್ಮಾನ..
2023-24ನೇ ಸಾಲಿನಲ್ಲಿ ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನೆಡೆಸಿದ ನಿರ್ಗಮಿತ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ನಿರ್ಗಮಿತ ಕಾರ್ಯದರ್ಶಿ ಡಾ.ರಾಮಚಂದ್ರ ಕೆ, ನಿರ್ಗಮಿತ ಕೋಶಾಧಿಕಾರಿ ಸಾಯಿರಾ ಝುಬೈರ್‌ರವರನ್ನು, ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ೪೦ ವರ್ಷಗಳಿಂದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಧನ್ವಂತರಿ ಆಸ್ಪತ್ರೆಯ ಶ್ರೀಮತಿ ರೇವತಿರವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಪದ ಪ್ರದಾನ…
ನೂತನ ಅಧ್ಯಕ್ಷ ಪಿ.ಎಂ ಅಶ್ರಫ್, ಕಾರ್ಯದರ್ಶಿ ಬಿ.ವಸಂತ್ ಶಂಕರ್, ಕೋಶಾಧಿಕಾರಿ ನವೀನ್‌ಚಂದ್ರ ನಾಕ್, ಜೊತೆ ಕಾರ್ಯದರ್ಶಿ ನವ್ಯಶ್ರೀ ನಾಕ್, ನಿಯೋಜಿತ ಅಧ್ಯಕ್ಷ ಚಂದ್ರಹಾಸ ರೈ ಬಿ, ಉಪಾಧ್ಯಕ್ಷ ಪ್ರದೀಪ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಲೋಕೇಶ್ ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕ ಜಗನ್ನಾಥ್ ಅರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್, ಚೇರ್‌ಮ್ಯಾನ್‌ಗಳಾದ ಡಾ.ರಾಮಚಂದ್ರ ಕೆ(ವೆಬ್), ಡಾ.ನಮಿತಾ(ಪೋಲಿಯೋ ಪ್ಲಸ್), ಭಾರತಿ ಎಸ್.ರೈ(ಟೀಚ್), ಜಯಪ್ರಕಾಶ್ ಅಮೈ(ಟಿಆರ್‌ಎಫ್), ಲಾವಣ್ಯ ನಾಕ್(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಪದ್ಮನಾಭ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ವಾರ್(ಫೆಲೋಶಿಪ್), ಶಾಂತಕುಮಾರ್(ಹಾಜರಾತಿ ಸಮಿತಿ), ಮೊಹಮ್ಮದ್ ರಫೀಕ್ ದರ್ಬೆ(ಸಿಎಲ್‌ಸಿಸಿ), ಅಮಿತಾ ಶೆಟ್ಟಿ(ಎಥಿಕ್ಸ್), ಸಂತೋಷ್ ಶೆಟ್ಟಿ(ಕ್ಲಬ್ ಫೆಸಿಲಿಟೇಟರ್)ರವರುಗಳಿಗೆ ಪದ ಪ್ರದಾನ ಅಧಿಕಾರಿರವರು ಪದ ಪ್ರದಾನವನ್ನು ನೆರವೇರಿಸಿದರು.