ಪುತ್ತೂರು: ಪುತ್ತೂರಿನಲ್ಲಿ ಕುಲಾಲ ಭವನದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದಕ್ಷಿಣ ಕನ್ನಡ ಉಡುಪಿ ಕೊಡಗು, ಮೈಸೂರು ಜಿಲ್ಲೆಗಳಿಗೆ ಕಾರ್ಯವ್ಯಾಪ್ತಿ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ಶಾಖೆ ಬೆಳ್ತಂಗಡಿಯ ಮಡಂತ್ಯಾರಿನ ಸೇಕ್ರೇಡ್ ಹಾರ್ಟ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಜು.11ರಂದು ಉದ್ಘಾಟನೆಗೊಳ್ಳಲಿದೆ.
ಶ್ರೀ ಕ್ಷೇತ್ರ ನಡುಬೊಟ್ಟಿನ ಧರ್ಮದರ್ಶಿ ರವಿ ಎನ್ ನಡುಬೊಟ್ಟ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗರು ಸ್ಟ್ಯಾನಿ ಗೋವಿಯಸ್ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್, ಮಡಂಡ್ಯಾರು ಗ್ರಾ.ಪಂ ಅದ್ಯಕ್ಷ ರೂಪಾ ನವೀನ್, ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲು, ಬಂಟ್ವಾಳ ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಬೆಳ್ತಂಗಡಿ ವಕೀಲ ಉದಯ ಬಿ.ಕೆ ಬಂದಾರು, ಮಾಲಾಡಿ ಗ್ರಾ.ಪಂ ಸದಸ್ಯ ರಾಜೇಶ್ ಕೊಡ್ಯೇಲು ಭಾಗವಹಿಸಲಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ದನ ಮೂಲ್ಯ ಅವರು ತಿಳಿಸಿದ್ದಾರೆ.
ರೂ. 477 ಕೋಟಿ ವ್ಯವಹಾರ, ರೂ. 2.44 ಕೋಟಿ ನಿವ್ವಳ ಲಾಭ
ರಾಜ್ಯ ಸರಕಾರದ ಪಾಲು ಬಂಡವಾಳ ಹೊಂದಿರುವ ಸಂಸ್ಥೆ 1958ನೇ ಇಸವಿಯಲ್ಲಿ ಗ್ರಾಮೀಣ ಕುಂಬಾರಿಕೆ ಮತ್ತು ಗುಡಿ ಕೈಗಾರಿಕೆಯ ಅಭಿವೃದ್ಧಿಗಾಗಿ, ಗ್ರಾಮೀಣ ಕುಂಬಾರ ಕುಶಲ ಕರ್ಮಿಗಳನ್ನು ಸದಸ್ಯರನ್ನಾಗಿಸಿ ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಿಗೆ ಕಾರ್ಯವ್ಯಾಪ್ತಿ ಹೊಂದಿ ಅಂದಿನ ಮದ್ರಾಸ್ ಸರಕಾರದಡಿ ರಚನೆಯಾಗಿತ್ತು. 66 ವರ್ಷಗಳ ಇತಿಹಾಸ ಇರುವ ಸಹಕಾರ ಸಂಘವು ಸದಸ್ಯರ ಅನುಕೂಲತೆಗಾಗಿ ಪುತ್ತೂರು, ಬೆಳ್ಳಾರೆ, ಗುರುವಾಯನಕೆರೆ, ಬೆಳ್ತಂಗಡಿ, ಕೌಡಿಚ್ಚಾರು, ಉಪ್ಪಿನಂಗಡಿ, ಕುಡ್ತಮುಗೇರು, ಮಾಣಿ, ವಿಟ್ಲ, ಮೆಲ್ಕಾರ್, ಸಿದ್ಧಕಟ್ಟೆ, ಬಿ.ಸಿ.ರೋಡ್, ಮುಡಿಪು ಮತ್ತು ಫರಂಗಿಪೇಟೆ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ರೂ. 93 ಕೋಟಿ ಗೂ ಮಿಕ್ಕಿ ಠೇವಣಿ ಸಂಗ್ರಹ, ರೂ. 76 ಕೋಟಿಗೂ ಅಧಿಕ ನಾನಾ ರೀತಿಯ ಸಾಲವನ್ನು ಸದಸ್ಯರಿಗೆ ವಿತರಿಸಿದೆ. 22ಸಾವಿರಕ್ಕೂ ಮಿಕ್ಕಿ ಸಂತೃಪ್ತ ಸದಸ್ಯರ ಬಲವನ್ನು ಹೊಂದಿದೆ. 2023-24ನೇ ಸಾಲಿನಲ್ಲಿ ರೂ. 477 ಕೋಟಿ ವ್ಯವಹಾರ ನಡೆಸಿ, ರೂ. 2.44 ಕೋಟಿ ನಿವ್ವಳ ಲಾಭ ಗಳಿಸಿ ನಿರಂತರ ಪ್ರಗತಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ತಿಳಿಸಿದ್ದಾರೆ.