ಉಪ್ಪಿನಂಗಡಿ: ಪಾರ್ಟ್ ಟೈಮ್ ಜಾಬ್- ವಂಚನಾ ಮೆಸೇಜ್-ಜಾಗೃತ ವ್ಯಕ್ತಿಯಿಂದ ವಿಫಲಗೊಂಡ ಸಂಚು

0

ಉಪ್ಪಿನಂಗಡಿ: ಎಲ್ಲೆಡೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸುವ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿದ್ದು, ಅಂತಹದ್ದೇ ಪ್ರಯತ್ನವೊಂದನ್ನು ಉಪ್ಪಿನಂಗಡಿಯ ಜಾಗೃತ ವ್ಯಕ್ತಿಯೋರ್ವರು ವಿಫಲಗೊಳಿಸಿದ ಘಟನೆ ವರದಿಯಾಗಿದೆ.


ಮೊಬೈಲ್ ಸಂಖ್ಯೆ 7975707799 ರ ಮೂಲಕ ವಾಟ್ಸಪ್ ಸಂದೇಶ ರವಾನಿಸಿದ ವಂಚಕರು, ತನ್ನನ್ನು ತಾನು ಮಾಯಾ ಆದಿತ್ಯ ಎಂದೂ, ತಾನು ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸ್ಟುಡಿಯೋ ಮೊಸೈಕ್ ಪ್ರೈ ಲಿ. ನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸುತ್ತಾ ದಿನಂಪ್ರತಿ 5 ಸಾವಿರದಿಂದ 10 ಸಾವಿರವರೆಗೆ ಮನೆಯಲ್ಲಿಯೇ ಕುಳಿತು ಸಂಪಾದಿಸುವ ಪಾರ್ಟ್ ಟೈಮ್ ಜಾಬ್ ಮಾಡಲು ಆಸಕ್ತರಿದ್ದೀರಾ ಎಂದು ತಿಳಿಸುತ್ತಾರೆ.
ಆಸಕ್ತಿ ಇದೆ ಎಂದು ಪ್ರತಿಕ್ರಿಯಿಸಿದಾಗ ನಿಮ್ಮ ಸಂಭಾವನೆಯನ್ನು ಇಂಡಿಯನ್ ಬ್ಯಾಂಕ್ ಮೂಲಕ ನಿಮಗೆ ಪಾವತಿಸಲಾಗುತ್ತದೆ. ಮತ್ತು ಹಣಕಾಸಿನ ವಿನಿಮಯದ ಬಗ್ಗೆ ಡೆಮೋ ಟಾಸ್ಕ್ ಮಾಡಲು ನೀವು ಸಿದ್ಧರಿದ್ದರೆ ಕೆಳಗೆ ಕಳುಹಿಸಲಾದ ವಾಟ್ಸಪ್ ಚಾನೆಲ್ ನ್ನು ಓಪನ್ ಮಾಡಲು ತಿಳಿಸುತ್ತಾರೆ.‌


ಈ ವೇಳೆ ಇದೊಂದು ವಂಚನಾ ಜಾಲವೆಂದು ಅರಿತ ವ್ಯಕ್ತಿ ಯಾವುದೇ ವ್ಯವಹಾರಕ್ಕೂ ಮುನ್ನಾ ವ್ಯವಹರಿಸುವ ನಿಮ್ಮ ಬಗ್ಗೆ ಮಾಹಿತಿ ನೀಡಿ, ಅದಕ್ಕಾಗಿ ನಿಮ್ಮ ಆಧಾರ್ ಸಹಿತ ವಿಳಾಸದ ವಿವರವನ್ನು ಕಳುಹಿಸಿ ಎಂದು ವಾಟ್ಸಪ್ ಸಂದೇಶ ರವಾನಿಸುತ್ತಾರೆ.


ಅತ್ತ ಕಡೆಯಿಂದ ಡಿಲ್ಲಿ ಎಂದಷ್ಟೇ ಮಾಹಿತಿ ನೀಡಿದ ವಂಚಕರು ಬಳಿಕ ಯಾವುದೇ ಸಂದೇಶವನ್ನು ನೀಡದೆ ಮರೆಯಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಹಣ ಸಂಪಾದಿಸುವ ಆಮಿಷವೊಡ್ಡಿ ಹಣ ಕಬಳಿಸುವ ಮಂದಿಯೊಂದಿಗೆ ವ್ಯವಹರಿಸುವಾಗ ಎಚ್ಚರವಹಿಸಬೇಕೆಂದು ವಿನಂತಿಸುತ್ತಾ, ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಪದೇ ಪದೇ ಕ್ರಿಯಾಶೀಲರಾಗುವ ಇಂತಹ ವಂಚಕರನ್ನು ಸದೆ ಬಡೆಯಲು ಒಂದಷ್ಟು ಬದ್ದತೆಯನ್ನು ಪ್ರದರ್ಶಿಸಬೇಕಾಗಿದೆ.

LEAVE A REPLY

Please enter your comment!
Please enter your name here