ಡೆಂಗ್ಯೂ ಜ್ವರ ನಿಯಂತ್ರಣದ ಕುರಿತು ಬಿಜೆಪಿಯಿಂದ ಜನಜಾಗೃತಿ ಜಾಥಾ

0

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಇದರ ವತಿಯಿಂದ ಡೆಂಗ್ಯೂ ಜ್ವರ ನಿಯಂತ್ರಣದ ಕುರಿತು ಜನಜಾಗೃತಿ ಜಾಥಾ ಜು.10ರಂದು ಸಂಜೆ ಪುತ್ತೂರು ನಗರದಲ್ಲಿ ನಡೆಯಿತು.


ಜಾಥಾಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ರಾಜ್ಯದಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿ ಜನತೆ ಬಲಿಯಾಗುತ್ತಿದ್ದರೂ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಇರುವುದರಿಂದ ಜನತೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಜ್ವರ ಹರಡುವ ಕುರಿತು ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಬಿಜೆಪಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಬಿಜೆಪಿಯಿಂದ ಕೋವಿಡ್ ಸಮಯದಲ್ಲಿ ಸಮರ್ಥವಾಗಿ ಎದುರಿಸಿದ ರೀತಿಯಲ್ಲಿ ಡೆಂಗ್ಯೂ ಜ್ವರವನ್ನು ಎದುರಿಸಲಾಗುವುದು. ಪ್ರತಿಯೊಬ್ಬರು ಆರೋಗ್ಯವಂತರಾಗಬೇಕು. ಇದಕ್ಕಾಗಿ ಎಲ್ಲಾ ವಾರ್ಡ್‌ಗಳಲ್ಲಿಯೂ ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸಿ ನೂರಕ್ಕೆ ನೂರು ನಿಯಂತ್ರಣ ತರಲು ಪ್ರಯತ್ನಿಸಲಾಗುವುದು. ನಗರ ಸಭೆಯ ಜೊತೆಗೂಡಿ ಜಾಗೃತಿ ಮೂಡಿಸಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕರಿಸುವ ಮೂಲಕ ಡೆಂಗ್ಯೂ ಮುಕ್ತ ನಗರ ನಿರ್ಮಾಣವಾಗಬೇಕು ಎಂದರು.


ಬಿಜೆಪಿ ಕಚೇರಿಯ ಬಳಿಯಿಂದ ಹೊರಟ ಜಾಥಾವು ಕೋರ್ಟ್‌ರಸ್ತೆ, ಎಂ.ಟಿ ರಸ್ತೆಯಾಗಿ ಸರಕಾರಿ ಆಸ್ಪತ್ರೆಯ ಬಳಿ ಸಮಾಪನಗೊಂಡಿತು. ನಗರ ಸಭಾ ಸದಸ್ಯರಾದ ಜೀವಂಧರ್ ಜೈನ್, ಸುಂದರ ಪೂಜಾರಿ ಬಡಾವು, ಪದ್ಮನಾಭ ಪಡೀಲ್, ವಿದ್ಯಾಗೌರಿ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ, ದೀಕ್ಷಾ ಪೈ, ಲೀಲಾವತಿ, ಸಂತೋಷ್ ಬೊಳುವಾರು, ರಮೇಶ್ ರೈ, ಪೂರ್ಣಿಮಾ, ಇಂದಿರಾ ಪುರುಷೋತ್ತಮ ಆಚಾರ್ಯ, ಶಿವಕುಮಾರ್ ಕಲ್ಲಿಮಾರ್, ಅನಿಲ್ ತೆಂಕಿಲ, ಹರಿಪ್ರಸಾದ್ ಯಾಧವ್, ಹರೀಶ್ ಬಿಜತ್ರೆ, ಅಶೋಕ್ ಬಲ್ನಾಡ್, ಪುರುಷೋತ್ತಮ ನಾಕ್ ಪಾಂಗಳಾಯಿ, ಸತೀಶ್ ನಾಕ್ ಪರ್ಲಡ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ಜಯಂತಿ ನಾಯಕ್, ರಾಧಾಕೃಷ್ಣ ನಂದಿಲ, ಯುವರಾಜ್ ಪೆರಿಯತ್ತೋಡಿ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here