






ಪುಣಚ: ಪುಣಚ ಗ್ರಾಮದ ದಿ.ಗಣೇಶ ಪೂಜಾರಿ ಅವರ ಪುತ್ರ ಬಳಂತಿಮೊಗರು ರಾದೀಪ್ ಪೂಜಾರಿ (38ವ) ಜು.11ರಂದು ನಿಧನರಾದರು.
ಮೃತರು ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಕೃಷಿ ಹಾಗೂ ಕೋಳಿ ಫಾರ್ಮ್ಸ್ ನಡೆಸುತ್ತಿದ್ದರು. ಅಲ್ಪಕಾಲದ ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರು ಪತ್ನಿ ದಿವ್ಯ ಹಾಗೂ ಪುತ್ರಿ ಲಿಪಿ ಆರ್.ರವರನ್ನು ಅಗಲಿದ್ದಾರೆ.










