ಕೇಕ್, ಸ್ವೀಟ್ಸ್, ಬೇಕರಿ ಉತ್ಪನ್ನಗಳ ಸುಸಜ್ಜಿತ ಮಳಿಗೆ
ಪುತ್ತೂರು: ಕುಂಬ್ರ ಪೇಟೆಯ ಜಂಕ್ಷನ್ನಲ್ಲಿರುವ ಹರ್ಷ ಕಾಂಪ್ಲೆಕ್ಸ್ನಲ್ಲಿ ಕೇಕ್, ಸ್ವೀಟ್ಸ್ ಹಾಗೂ ಬೇಕರಿ ಉತ್ಪನ್ನಗಳ ಮಾರಾಟ ಮಳಿಗೆ ಫ್ರೆಂಡ್ಸ್ ಬೇಕ್ ಬೇಕರಿ ಜು.11ರಂದು ಶುಭಾರಂಭಗೊಂಡಿತು. ಫ್ರೆಂಡ್ಸ್ ಬೇಕ್ರವರ 4ನೇ ಸಂಸ್ಥೆಯಾಗಿರುವ ಕುಂಬ್ರದ ಫ್ರೆಂಡ್ಸ್ ಬೇಕ್ ಬೇಕರಿಯನ್ನು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪೇಟೆಯ ಹೃದಯ ಭಾಗದಲ್ಲಿ ಬಹಳ ಸುಸಜ್ಜಿತವಾಗಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಫ್ರೆಂಡ್ಸ್ ಬೇಕರಿ ಇದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿ, ಸಂಸ್ಥೆಯು ಅಭಿವೃದ್ದಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು. ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಕುಂಬ್ರ ಹರ್ಷ ಸಂಕೀರ್ಣದ ಮಾಲಕ ಡಾ.ಹರ್ಷ ಕುಮಾರ್ ರೈ ಮಾಡಾವುರವರು ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಸಂಸ್ಥೆಯು ಯಶಸ್ವಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಬೆಳೆಯುತ್ತಿರುವ ಪೇಟೆಗೆ ಮತ್ತೊಂದು ಸಂಸ್ಥೆ ಸೇರಿಕೊಂಡಿದ್ದು ಖುಷಿ ಕೊಟ್ಟಿದೆ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಸಂಸ್ಥೆ ಯಶಸ್ಸು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು. ಪುತ್ತೂರು ಅಕ್ಷಯ ಕಾಲೇಜ್ನ ಸಂಚಾಲಕ, ಉದ್ಯಮಿ ಜಯಂತ್ ನಡುಬೈಲ್ ಮಾತನಾಡಿ, ದೈವ ದೇವರ ಅನುಗ್ರಹ ಹಾಗೂ ಗ್ರಾಹಕರ ಪ್ರೋತ್ಸಾಹದೊಂದಿಗೆ ಸಂಸ್ಥೆ ಅಭಿವೃದ್ದಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು. ಧಾರ್ಮಿಕ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ, ಫ್ರೆಂಡ್ಸ್ ಬೇಕರಿಯವರ 4ನೇ ಸಂಸ್ಥೆ ಇದಾಗಿದ್ದು ಮುಂದಿನ ದಿನಗಳಲ್ಲಿ ದೈವ ದೇವರ ಅನುಗ್ರಹ ಹಾಗೂ ಗ್ರಾಹಕರ ಪ್ರೋತ್ಸಾಹದೊಂದಿಗೆ ಇನ್ನಷ್ಟು ಸಂಸ್ಥೆ ಹುಟ್ಟಿಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ವ್ಯಾಪಾರದಲ್ಲಿ ನಗು ಮೊಗದ ಸೇವೆಯೇ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಫ್ರೆಂಡ್ಸ್ ಬೇಕರಿಯಿಂದ ಜನರಿಗೆ ನಗುಮೊಗದ ಸೇವೆ ದೊರೆಯಲಿ ಆ ಮೂಲಕ ಸಂಸ್ಥೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು. ನಟ,ನಿರ್ದೇಶಕ ಸುಂದರ ರೈ ಮಂದಾರ ಮಾತನಾಡಿ, ಕುಂಬ್ರದಲ್ಲಿ ಈಗಾಗಲೇ 6ರಷ್ಟು ಬೇಕರಿ ಅಂಗಡಿಗಳಿವೆ. ಕುಂಬ್ರದ ಜನರು ಸಿಹಿಯನ್ನು ಹಂಚುವವರು ಮತ್ತು ಖರೀದಿಸುವವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನೂತನವಾಗಿ ಆರಂಭಗೊಂಡ ಫ್ರೆಂಡ್ಸ್ ಬೇಕರಿ ಕೂಡ ಧನಾತ್ಮಕ ಚಿಂತನೆಯೊಂದಿಗೆ ಯಶಸ್ಸನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಉದ್ಯಮಿ ಹರೀಶ್ ಕುಮಾರ್ ನಿರಾಲ, ಗಣೇಶ್ ಪಂಚಮಿ ಕುಂಬ್ರ, ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಪುತ್ತೂರು ಫ್ರೆಂಡ್ಸ್ ಬೇಕ್ನ ಮಾಲಕ ಶೇಖರ ಪೂಜಾರಿ, ಏಳ್ಮುಡಿ ಫ್ರೆಂಡ್ಸ್ ಬೇಕ್ನ ಸಂದೀಪ್ ರೈ, ಎಡಮಂಗಲ ಫ್ರೆಂಡ್ಸ್ ಬೇಕ್ನ ಮೋಹನ್ ಡಿ, ಸುಳ್ಯ ಫ್ರೆಂಡ್ಸ್ ಬೇಕ್ನ ಭಾಸ್ಕರ ರೈ, ವಕೀಲರಾದ ಕುಮಾರನಾಥ ಎಸ್, ದರ್ಬೆ ಈಶ ಫ್ಲವರ್ಸ್ನ ಲೋಹಿತ್ ಸಾಲಿಯಾನ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಕುಂಬ್ರ ಫ್ರೆಂಡ್ಸ್ ಬೇಕ್ ಬೇಕರಿಯ ಮಾಲಕರಾದ ಕರುಣಾಕರ ಸಾಲಿಯಾನ್ ಸುಭಾಷ್ನಗರ ನೆಕ್ಕಿಲಾಡಿ ಹಾಗೂ ಸಹೋದರರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು. ಮಾಲಕರ ತಾಯಿ ಲೀಲಾವತಿ ಉಪಸ್ಥಿತರಿದ್ದರು. ವಿ.ಜೆ ವಿಖ್ಯಾತ್ ಡಿಜಿಟಲ್ ಮಿಡಿಯಾದ ವಿ.ಜೆ ವಿಖ್ಯಾತ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಕುಮಾರನಾಥ್, ಲೋಹಿತ್ ಕುಮಾರ್, ಶರತ್, ಶೇಖರ್ ಪೂಜಾರಿ ವಿಟ್ಲ, ದಿವಾಕರ್, ದಿನೇಶ್ ರೈ, ಬಾಲಚಂದ್ರ, ಗೀತಾ ಸಹಕರಿಸಿದ್ದರು.
ಫ್ರೆಂಡ್ಸ್ ಬೇಕ್ ಬೇಕರಿಯಲ್ಲಿ ಏನೇನಿದೆ…?
ಪುತ್ತೂರು, ಸುಳ್ಯ, ಎಡಮಂಗಲಗಳಲ್ಲಿ ಈಗಾಗಲೇ ಗ್ರಾಹಕರ ಮನ ಗೆದ್ದಿರುವ ಫ್ರೆಂಡ್ಸ್ ಬೇಕ್ ಬೇಕರಿಯು ಕುಂಬ್ರದಲ್ಲಿ 4ನೇ ಶಾಖೆಯಾಗಿ ಆರಂಭಗೊಂಡಿದ್ದು ಇದರಲ್ಲಿ ಮುಖ್ಯವಾಗಿ ಎಲ್ಲಾ ಬಗೆಯ ಸ್ವೀಟ್ಸ್ ಐಟಮ್ಗಳು, ವಿವಿಧ ವಿನ್ಯಾಸದಲ್ಲಿ ಬರ್ತಡೇ, ವೆಡ್ಡಿಂಗ್, ಕ್ರಿಸ್ಮಸ್, ಅನಿವರ್ಷರಿ ಕೇಕ್ಗಳು ಲಭ್ಯವಿದೆ. ಇದಲ್ಲದೆ ಮೊಟ್ಟೆ ಪಫ್ಸ್, ವೆಜ್ ಪಫ್ಸ್, ಪನ್ನೀರ್ ಪಫ್ಸ್,ಚಿಕನ್ ಪಫ್ಸ್ಗಳು ಲಭ್ಯ. ಎಗ್ಲೆಸ್ ಕೇಕ್, ಫೋಟೋ ಪ್ರಿಂಟ್ ಕೇಕ್ ಹಾಗೇ ಚಹಾ,ಕಾಫಿ, ಫ್ರೆಶ್ ಜ್ಯೂಸ್ಗಳು ಲಭ್ಯವಿದೆ.
ವಿಶೇಷ ಆಫರ್
ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಫ್ರೆಂಡ್ಸ್ ಬೇಕ್ ವಿಶೇಷ ಆಫರ್ ನೀಡುತ್ತಿದೆ. ರೂ.1 ಸಾವಿರದ ಸ್ವೀಟ್ಸ್ ಖರೀದಿಸಿದರೆ 2 ಲೀಟರ್ ಜ್ಯೂಸ್ ಬಾಟಲ್ ಉಚಿತ, 1 ಕೆ.ಜಿ ಕೋಲ್ಡ್ ಕೇಕ್ ಖರೀದಿಸಿದರೆ ಅರ್ಧ ಲೀಟರ್ ಜ್ಯೂಸ್ ಬಾಟಲ್ ಉಚಿತ ಹಾಗೇ ಅರ್ಧ ಕೆ.ಜಿ ಕೇಕ್ ಖರೀದಿಸಿದರೆ ಕಾಲು ಲೀಟರ್ ಜ್ಯೂಸ್ ಬಾಟಲ್ ಉಚಿತವಾಗಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9902138981 ಅಥವಾ 9901830393 ಗೆ ಸಂಪರ್ಕಿಸಬಹುದಾಗಿದೆ.
ಉದ್ದಡ್ಕ ಕಲ್ಲುರ್ಟಿ ತುಳು ಭಕ್ತಿಗೀತೆ ಬಿಡುಗಡೆ
ಫ್ರೆಂಡ್ಸ್ ಬೇಕ್ ಬೇಕರಿ ಶುಭಾರಂಭದ ಸಂದರ್ಭದಲ್ಲಿ ಉದ್ದಡ್ಕದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಕಲ್ಲುರ್ಟಿ ದೇವತೆಯ ಬಗ್ಗೆ ಬರೆದಿರುವ ‘ಉದ್ದಡ್ಕ ಕಲ್ಲುರ್ಟಿ’ ತುಳು ಭಕ್ತಿಗೀತೆಯನ್ನು ನಟ, ನಿರ್ದೇಶಕ ಸುಂದರ ರೈ ಮಂದಾರ ಬಿಡುಗಡೆಗೊಳಿಸಿದರು. ಶೇಖರ ಪೂಜಾರಿ ನಿರ್ಮಾಣದಲ್ಲಿ ಪದ್ಮರಾಜ್ ಬಿಸಿ ಚಾರ್ವಕ ಇವರ ಸಂಗೀತ ಮತ್ತು ಸಾಹಿತ್ಯದಲ್ಲಿ ಮೂಡಿಬಂದ ಗೀತೆಯನ್ನು ಪವಿತ್ರ ಮಯ್ಯ ಹಾಡಿದ್ದಾರೆ. ವಿಥುನ್ರಾಜ್ ವಿದ್ಯಾಪುರ ರೇಕಾರ್ಡಿಂಗ್ ಹಾಗೂ ಮಾಸ್ಟರಿಂಗ್ ಮಾಡಿದ್ದಾರೆ.