ಜ್ಞಾನ ಭಾರತಿ ಆ.ಮಾ ಶಾಲೆಯ ವಿದ್ಯಾರ್ಥಿ ನಾಯಕಿಯಾಗಿ ನಿಹಮ ಫಾತಿಮ

0

ಉಪ್ಪಿನಂಗಡಿ: ಇಲ್ಲಿನ ವಿದ್ಯಾನಗರದಲ್ಲಿರುವ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿಗಾಗಿ ಚುನಾವಣೆ ನಡೆದು, ವಿದ್ಯಾರ್ಥಿ ನಾಯಕಿಯಾಗಿ 9ನೇ ತರಗತಿಯ ನಿಹಮ ಫಾತಿಮ ಚುನಾಯಿತಳಾಗಿದ್ದಾಳೆ.


ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಶಾನಾಕೀಲ್, ಆರೋಗ್ಯ ಮಂತ್ರಿಯಾಗಿ 9ನೇ ತರಗತಿಯ ಶೆಹರಿಷ್, ಶಿಕ್ಷಣ ಮಂತ್ರಿಯಾಗಿ 9ನೇ ತರಗತಿಯ ಆಯಿಶಾ, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಹರ್ಷಿದ ಆಯ್ಕೆಯಾಗಿದ್ದಾರೆ.


ಶಾಲಾ ಸಂಸತ್ ಪ್ರತಿನಿಧಿಗಳನ್ನು ಶಾಲಾ ಸಂಚಾಲಕ ರವೂಫ್ ಯು.ಟಿ. ಮತ್ತು ಪ್ರಾಂಶುಪಾಲ ಇಬ್ರಾಹೀಂ ಕಲೀಲ್ ಹೇಂತಾರ್ ಅಭಿನಂದಿಸಿದರು. ಚುನಾವಣಾ ಮುಖ್ಯಾಧಿಕಾರಿಯಾಗಿ ಸವಿತಾ, ಚುನಾವಣಾ ಅಧಿಕಾರಿಗಳಾಗಿ ಅರುಣಾ ಸುಹೈರಾ, ಉಷಾ, ನೇತ್ರ, ಫಾತಿಮಾ, ಸರೀನಾ, ಸಫ್ರಾ, ಸುಸ್ಮಿತ, ಸ್ವಾತಿ, ಪ್ರತೀಕ್ಷ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here