ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಜಗನ್ನಾಥ ಪಿ ಅವರಿಗೆ ಲಯನ್ಸ್‌ ಕ್ಲಬ್‌ನಿಂದ ಸನ್ಮಾನ

0

ಪುತ್ತೂರು: ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಗೃಹರಕ್ಷಕ ದಳದ ಹಿರಿಯ ಸಿಬ್ಬಂದಿ ಜಗನ್ನಾಥ ಪಿ ಅವರನ್ನು ಪುತ್ತೂರು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಪ್ರದಾನ ಅಧಿಕಾರಿಯಾಗಿ ಆಗಮಿಸಿದ ಮಂಗಳೂರು ಲಯನ್ಸ್‌ಕ್ಲಬ್ ಅಧ್ಯಕ್ಷ ಎಸ್.ಶೀನ ಪೂಜಾರಿ ಅವರು ಜಗನ್ನಾಥ ಪಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಪ್ರೇಮಲತಾ ರಾವ್, ನಿರ್ಗಮನ ಅಧ್ಯಕ್ಷ ಸದಾಶಿವ ನಾಕ್ ಸಹಿತ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here