ಉಪ್ಪಿನಂಗಡಿ: ಗರುಡ ಗ್ಯಾಂಗ್‌ಗೆ ನೆರವು- ಮಹಿಳೆ ಪೊಲೀಸ್ ವಶ

0

ಉಪ್ಪಿನಂಗಡಿ: ಕಾಪು ಗರುಡ ಗ್ಯಾಂಗ್‌ನ ಸದಸ್ಯರಿಗೆ ಹಣಕಾಸಿನ ನೆರವು ನೀಡಿದ ಹಿನ್ನೆಲೆಯಲ್ಲಿ ಗರುಡ ಗ್ಯಾಂಗ್ ಸದಸ್ಯನೋರ್ವನ ಸಂಬಂಧಿ ಉಪ್ಪಿನಂಗಡಿಯ ಕರ್ವೇಲು ನಿವಾಸಿ ಸಫಾರ ಯಾನೆ ಸಾಜಿದ (21) ಎಂಬಾಕೆಯನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮೂರುಗೋಳಿಯ ಕಳೆಂಜಿಬೈಲು ನಿವಾಸಿಯಾಗಿರುವ ಸಾಜಿದಾ ಅವರನ್ನು ಕರ್ವೇಲಿನ ಬಾನೊಟ್ಟು ನಿವಾಸಿ ಝಕಾರಿಯಾ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಇವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಝಕಾರಿಯಾನ ಸಂಬಂಧಿಯೋರ್ವ ಗರುಡ ಗ್ಯಾಂಗ್‌ನ ಸದಸ್ಯನಾಗಿದ್ದು, ಈತನಿಗೆ ಸಾಜಿದಾಳು ಹಣಕಾಸಿನ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಕರ್ವೇಲಿನ ಮನೆಯಲ್ಲಿದ್ದ ಈಕೆಯನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.


ಚೂರಿ ಇರಿತಕ್ಕೆ ಗರುಡ ಗ್ಯಾಂಗ್ ಲಿಂಕ್:
ಕೆಲವು ತಿಂಗಳ ಹಿಂದೆ ಕಾರಿನಲ್ಲಿ ಬಂದ ತಂಡವೊಂದು ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಎಂಬಾತನಿಗೆ ಕರ್ವೇಲು ಜಂಕ್ಷನ್‌ನಲ್ಲೇ ಬೆಳಗ್ಗೆ ಚೂರಿ ಇರಿದು ಪರಾರಿಯಾಗಿದ್ದ. ಇದು ಗರುಡ ಗ್ಯಾಂಗ್‌ನ ಕೃತ್ಯವಾಗಿದ್ದು, ಚೂರಿ ಇರಿದ ನಾವುಂದ ನಿವಾಸಿ ಇಸಾಕ್ ಎಂಬಾತ ಗರುಡ ಗ್ಯಾಂಗ್‌ನ ಸದಸ್ಯ ಎನ್ನಲಾಗಿದೆ. ಈತನ ಅಜ್ಜಿ ಮನೆ ಕರ್ವೇಲು ಆಗಿದ್ದು, ಈತ ಝಕಾರಿಯ ಸಂಬಂಧಿ ಎನ್ನಲಾಗಿದೆ.

LEAVE A REPLY

Please enter your comment!
Please enter your name here