34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆತ- 3 ಸಾವಿರ ರೂ. ದಂಡ

0

ಉಪ್ಪಿನಂಗಡಿ: ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯೋರ್ವರಿಗೆ 34 ನೆಕ್ಕಿಲಾಡಿ ಗ್ರಾ.ಪಂ. ಮೂರು ಸಾವಿರ ರೂ. ಡಂಡ ವಿಧಿಸಿದ ಘಟನೆ ನಡೆದಿದೆ.
ಪೆರ್ನೆ ಗ್ರಾ.ಪಂ. ವ್ಯಾಪ್ತಿಯ ಬದ್ರುದ್ದೀನ್ ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡಿದ್ದಕ್ಕೆ ದಂಡ ಪಾವತಿಸಿದ ವ್ಯಕ್ತಿ. 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಕರ್ವೇಲು- ಶಾಂತಿನಗರ ರಸ್ತೆಯ ಬದಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು, ಇದನ್ನು ಪರಿಶೀಲಿಸಿದಾಗ ಬದ್ರುದ್ದೀನ್ ಎಂಬವರು ಇದನ್ನು ಇಲ್ಲಿ ತಂದು ಬಿಸಾಡಿದ್ದಾರೆ ಎಂಬ ಮಾಹಿತಿ ದೊರಕಿದ ಮೇರೆಗೆ ಅವರಿಗೆ ಗ್ರಾ.ಪಂ. 3 ಸಾವಿರ ರೂ. ದಂಡ ವಿಧಿಸಿದೆ.

LEAVE A REPLY

Please enter your comment!
Please enter your name here