ವಿ.ಸುಕನ್ಯಾ ಕಾಮತ್ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ

0

ನಿಡ್ಪಳ್ಳಿ; ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024 ಇದರ ವತಿಯಿಂದ ಮೇ ತಿಂಗಳಲ್ಲಿ ನಡೆದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಜಿರೆ  ಎಸ್. ಡಿ.ಎಂ ಮಹಿಳಾ ಐಟಿಐ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಮತ್ತು ರಾಧಿಕಾ ಕಾಮತ್ ಗುರುವಾಯನಕೆರೆ ದಂಪತಿಗಳ  ಪುತ್ರಿ ಸುಕನ್ಯಾ ಕಾಮತ್ ಉತ್ತಮ ಅಂಕದೊಂದಿಗೆ ಉತ್ತಿರ್ಣರಾಗಿದ್ದಾರೆ. ಸುಳ್ಯಪದವು ಕನ್ನಡ್ಕ ದಿ. ಸದಾನಂದ ನಾಯಕ್ ಇಂದಾಜೆ ಮತ್ತು ದಿ. ಚಂದ್ರಕಲಾ ನಾಯಕ್ ಇವರ ಮೊಮ್ಮಗಳು. ಇವರು ಸಿ.ಎ ದಾಮೋದರ ನಾಯಕ್ ಇವರ ದಾಮೋದರ್ & ಕೋ.ಇಲ್ಲಿ ಆರ್ಟಿಕಲ್ ಶಿಪ್ ಮತ್ತು ತರಬೇತಿ ಪಡೆದುಕೊಂಡಿದ್ದಾರೆ.

 ವಿ. ಸಿ.ಎಸುಕನ್ಯಾ ಕಾಮತ್ ರವರು ಬಹುಮುಖ ಪ್ರತಿಭೆಯಾಗಿದ್ದು, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಬರೆದಿರುತ್ತಾರೆ. ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ತೇರ್ಗಡೆಗೊಳಿಸಿದ್ದಾರೆ. ಗುರುವಾಯನಕೆರೆ ಶ್ರೀವೀರ ವರದ ಪಾಂಡುರಂಗ ಭಜನಾ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ಯುವಜನ ಮೇಳಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಲೇಖನ, ಕವಿತೆಗಳನ್ನು ದಿನಪತ್ರಿಕೆಗಳಿಗೆ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

LEAVE A REPLY

Please enter your comment!
Please enter your name here