ಅಗ್ನಿಶಾಮಕ, ವಿಪತ್ತು ನಿರ್ವಾಹಣ ತಂಡದಿಂದ ಮರ ತೆರವು ಕಾರ್ಯಾಚರಣೆ
ಪುತ್ತೂರು: ನಿರಂತೆ ಎಡೆಬಿಡದೆ ಸುರಿದ ಮಳೆಗೆ ತೆಂಕಿಲ ಬೈಪಾಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದ ಜು.13 ರ ಬೆಳಗ್ಗೆ ಬಿದ್ದಿದೆ. ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಅಗ್ನಿಶಾಮಕ ಮತ್ತು ವಿಪತ್ತು ನಿರ್ವಾಹಣಾ ತಂಡ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ತೆಂಕಿಲ ಬೈಪಾಸ್ ರಸ್ತೆಯ ವಿವೇಕಾನಂದ ಶಾಲಾ ಕ್ಯಾಂಪಸ್ ಬಳಿ ಕಿರು ಸೇತುವೆ ಪಕ್ಕದಲ್ಲೆ ಮರ ಬಿದ್ದಿದೆ. ರಸ್ತೆಗೆ ಅಡ್ಡವಾಗಿ ಮರ ಬಿದ್ದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬದಲಿ ರಸ್ತೆಯಾಗಿ ವಾಹನ ಸವಾರರು ಪುತ್ತೂರು ಪೇಟೆಯ ಮೂಲಕ ಮಂಗಳೂರು ಮತ್ತು ಸುಳ್ಯ ರಸ್ತೆಯನ್ನು ಬಳಸಿದ್ದರು.
ಮರ ತೆರವು ಕಾರ್ಯಾಚರಣೆ:
ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ಅಗ್ನಿಶಾಮಕದಳ ಮತ್ತು ವಿಪತ್ತು ನಿರ್ವಾಹಣಾ ತಂಡದವರು ತೆರವು ಕಾರ್ಯಾಚರಣೆ ನಡೆಸಿದರು. ಮರ ತೆರವಾದ ಬಳಿಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.