ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಹಾಗೂ ‘ಗತಿ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಜು.12ರಂದು ನಡೆಯಿತು.
ಹಿರಿಯ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜಿನ ಪ್ರಶಿಕ್ಷಣಾರ್ಥಿಗಳೇ ರಚಿಸಿ, ನಿರ್ಮಿಸಿ, ನಿರ್ದೇಶಿಸಿದ ‘ಗತಿ’ ಎಂಬ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಶಿಕ್ಷಣದೊಂದಿಗೆ ರಂಗ ಶಿಕ್ಷಣ ತುಂಬಾ ಮುಖ್ಯ. ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಪ್ರತಿಭೆಗಳು ಇರುತ್ತವೆ. ಆ ಪ್ರತಿಭೆಯನ್ನು ಹೊರಹೊಮ್ಮಿಸಲು ಒಂದು ಉತ್ತಮವಾದ ವೇದಿಕೆಯಿದ್ದರೆ ವಿದ್ಯಾರ್ಥಿಗಳಿಗೆ ತೋರ್ಪಡಿಸಲು ಸಾಧ್ಯ. ಭಾವಿ ಶಿಕ್ಷಕರು ಶಿಕ್ಷಣದ ಜೊತೆಗೆ ರಂಗ ಶಿಕ್ಷಣವನ್ನೂ ಪಡೆದುಕೊಂಡರೆ ಮುಂದೆ ತಮ್ಮ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಓ ಸೃಜನ್ ಊರುಬೈಲು, ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ, ನಟ ಚೇತನ್ ರೈ ಮಾಣಿ, ರಂಗ ಶಿಕ್ಷಣ ತರಬೇತುದಾರ ರಾಕೇಶ್ ಆಚಾರ್ಯ, ಕಾಲೇಜಿನ ಪ್ರಾಂಶುಪಾಲೆ ಡಾ|ಶೋಭಿತ ಸತೀಶ್, ಕಾರ್ಯಕ್ರಮದ ಸಂಯೋಜಕ ಸಹಾಯಕ ಪ್ರಾಧ್ಯಾಪಕಿ ರಾಜೀವಿ.ಬಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮದೈವ ಚಿತ್ರತಂಡ, ಸುದ್ದಿ ಬಿಡುಗಡೆಯ ಹಮೀದ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಸಹಾಯಕ ಪ್ರಾಧ್ಯಾಪಕರು, ಕಚೇರಿ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ|ಶೋಭಿತ ಸತೀಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಿಕ್ಷಣಾರ್ಥಿಗಳಾದ ಅಂಕಿತ. ಪಿ, ಅನನ್ಯ, ಚರಿತಾ, ಜಯಶ್ರೀ, ಮಹೇಶ್, ಪ್ರಾಣೇಶ್ ಪ್ರಾರ್ಥಿಸಿ, ಕಾರ್ತಿಕ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ರಾಜೀವಿ ಬಿ ಧನ್ಯವಾದ ಸಲ್ಲಿಸಿದರು.
ನಂತರ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ನಾಟಕಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನರಂಜಿಸಿದರು.