ಪುತ್ತೂರು: ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಅನುಪಮ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯಗುರು ತಾರಾನಾಥ ಸವಣೂರುರವರು ಮಾತನಾಡಿ, ಭಾರತವು ವಿಶ್ವದ ಅತಿ ಹೆಚ್ಚು ಮಕ್ಕಳ ಜನಸಂಖ್ಯೆಯನ್ನು ಹೊಂದಿದೆ. ದೇಶದಲ್ಲಿ ಮಕ್ಕಳ ರಕ್ಷಣೆಯನ್ನು ಭಾರತೀಯ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಭಾರತೀಯ ನಾಗರಿಕರಿಗೆ ಖಾತರಿಪಡಿಸಲಾಗಿದೆ. ಮಕ್ಕಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಭಾರತದ ಸಂಸತ್ತು ‘ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಮಸೂದೆ 2011 ಅನ್ನು 22ಮೇ 2012 ರಂದು ಒಂದು ಕಾಯಿದೆಯಾಗಿ ಅಂಗೀಕರಿಸಿತು. ಕಾನೂನಿಗೆ ಅನುಸಾರವಾಗಿ ಸರ್ಕಾರವು ರೂಪಿಸಿದ ನಿಯಮಗಳನ್ನು 2012 ರ ನವೆಂಬರ್‌ನಲ್ಲಿ ತಿಳಿಸಲಾಗಿದೆ ಮತ್ತು ಕಾನೂನು ಅನುಷ್ಠಾನಕ್ಕೆ ಸಿದ್ಧವಾಗಿದೆ.
ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ಅನ್ನು ಜಾರಿಗೆ ತರಲಾಯಿತು. ನ್ಯಾಯಾಂಗವು ಪ್ರತಿಯೊಂದು ಹಂತದಲ್ಲೂ ಮಗುವಿನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ನುಡಿದರು.
ಗೊತ್ತುಪಡಿಸಿದ ವಿಶೇಷ ನ್ಯಾಯಾಲಯಗಳ ಮೂಲಕ ಮಕ್ಕಳ ಸ್ನೇಹಿ ವರದಿಗಾರಿಕೆ, ಸಾಕ್ಷ್ಯಗಳ ರೆಕಾರ್ಡಿಂಗ್, ತನಿಖೆ ಮತ್ತು ಅಪರಾಧಗಳ ತ್ವರಿತ ವಿಚಾರಣೆಗೆ ಯಾಂತ್ರಿಕ ವ್ಯವಸ್ಥೆಗಳನ್ನು ಸೇರಿಸಲು ಕಾಯಿದೆಯ ಚೌಕಟ್ಟು ಪ್ರಯತ್ನಿಸುತ್ತದೆ.
ಹೊಸ ಕಾಯಿದೆಯು ವಿವಿಧ ಅಪರಾಧಗಳ ಬಗ್ಗೆ ಮತ್ತು ಅದರ ಅಡಿಯಲ್ಲಿ ಆರೋಪಿಗೆ ಶಿಕ್ಷೆಯಾಗುವ ಬಗ್ಗೆ ಮಾಹಿತಿ ಇದೆ ಎಂದರು ಶಿಕ್ಷಕ ವೃಂದದವರು,ಎಸ್ ಡಿ ಎಂ ಸಿ ಸರ್ವಸದಸ್ಯರು ವಿದ್ಯಾರ್ಥಿಗಳು ಪಾಲ್ಗೊಂಡರು.