ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ವಿದ್ಯುತ್ ಲೈನ್ ನೇತಾಡಿಕೊಂಡು ಅಪಾಯದ ಸ್ಥಿತಿಯಲ್ಲಿದ್ದ ವಿದ್ಯುತ್ ತಂತಿಯನ್ನು ಕೊನೆಗೂ ಮೆಸ್ಕಾಂ ಇಲಾಖೆಯವರು ಎತ್ತರಕ್ಕೆ ಅಳವಡಿಸಿ ಸರಿಪಡಿಸಿದ್ದಾರೆ. ಕುದ್ದಾರು ಸಮೀಪ ಶಾಂತಿಮೊಗರು ಎಂಬಲ್ಲಿ ಸೇತುವೆ ಪಕ್ಕ ಕುಮಾರಧಾರ ನದಿಯ ಮೂಲಕ ಅಲಂಕಾರಿಗೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮಳೆ, ಗಾಳಿಗೆ ಜೋತು ಬಿದ್ದು, ಕೈಗೆ ನಿಲುಕುವಂತೆ ಹಾದು ಹೋಗಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿತ್ತು. ಸೇತುವೆಯ ಪ್ರಕೃತಿಯ ಸೌಂದರ್ಯವನ್ನು ನೋಡಲು ಸಾಕಷ್ಟು ಜನರು ಆಗಮಿಸುವುದರಿಂದ ನೇತಾಡುತ್ತಿರುವ ಈ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿರುವ ನಿಟ್ಟಿನಲ್ಲಿ ವಿದ್ಯುತ್ ತಂತಿಯನ್ನು ಎತ್ತರಕ್ಕೆ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಕುದ್ಧಾರು ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ನಿಂದ ಬೆಳಂದೂರು ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ನಿಂದ ಬೆಳಂದೂರು ಗ್ರಾಮ ಪಂಚಾಯತ್ ಗೆ ಮನವಿ ಮಾಡಿದ್ದರು. ಅಲ್ಲದೆ ಅಪಾಯಕಾರಿ ವಿದ್ಯುತ್ ತಂತಿ ಬಗ್ಗೆ ‘ಸುದ್ದಿ’ಯಲ್ಲಿ ವರದಿ ಪ್ರಕಟ ಗೊಂಡಿತ್ತು.