ಉಪ್ಪಿನಂಗಡಿ: ತುಂಬಿ ಹರಿಯುತ್ತಿರುವ ಜೀವ ನದಿಗಳು

0

ಉಪ್ಪಿನಂಗಡಿ: ಇಲ್ಲಿ ಹರಿಯುತ್ತಿರುವ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಜು.15ರ ಬೆಳಗ್ಗಿನಿಂದ ತುಂಬಿ ಹರಿಯಲಾರಂಭಿಸಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಪ್ರವಾಹ ಜಾಸ್ತಿ ಇದ್ದು, ಪ್ರವಾಹದ ನೀರು ನದಿ ಪಾತ್ರದಿಂದ ಹೊರಗೆ ನಟ್ಟಿಬೈಲ್‌ನಲ್ಲಿ ತೋಟಗಳಿಗೆ ನುಗ್ಗಿರುವುದು ಕಂಡು ಬಂದಿದೆ.


ಉಪ್ಪಿನಂಗಡಿಯಲ್ಲಿ ಹವಾಮಾನ ಇಲಾಖೆಯ ಪ್ರಕಾರ ಜು. 14ರಂದು 4. ಸೆಂ. ಮೀ. ಮೀಟರ್., 13ರಂದು 2 ಸೆ.ಮೀ., 12ರಂದು 8ಸೆ.ಮೀ. ಮಳೆ ಸುರಿದಿರುವುದು ದಾಖಲಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನದ ಬಳಿಯಲ್ಲಿ ಶಂಭೂರು ಡ್ಯಾಂನವರು ಅಳವಡಿಸದಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ಸೋಮವಾರ ರಾತ್ರಿಯ ಹೊತ್ತಿನಲ್ಲಿ ನದಿ ಸಮುದ್ರ ಮಟ್ಠದಿಂದ 27.೦5 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಇಲ್ಲಿನ ಅಪಾಯದ 31.೦5 ಮೀಟರ್ ಆಗಿರುತ್ತದೆ.

23 ಮೆಟ್ಟಿಲು ಮುಳುಗಡೆ:
ಜುಲೈ 15ರ ಬೆಳಗ್ಗಿನಿಂದಲೇ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಲೇ ಇದ್ದು, ಪ್ರವಾಹದ ರೀತಿಯಲ್ಲಿ ಹರಿದು ಬರುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಪ್ರವಾಹ ತುಸು ಕಡಿಮೆ ಇದ್ದು, ಮಧ್ಯಾಹ್ನದ ಬಳಿಕ ನಿಧಾನವಾಗಿ ಏರಿಕೆ ಆಗುತ್ತಿರುವುದು ಕಂಡು ಬಂದಿದೆ. ನದಿ ಪಾತ್ರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸ್ನಾನಘಟ್ಟದ 36 ಮೆಟ್ಟಿಲುಗಳ ಪೈಕಿ ರಾತ್ರಿಯ ಹೊತ್ತಿಗೆ 23 ಮೆಟ್ಟಿಲು ಮುಳುಗಡೆಯಾಗಿತ್ತು. 13 ಮೆಟ್ಟಿಲು ಕಾಣುತ್ತಿತ್ತು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಗೃಹ ರಕ್ಷಕದ ದಳದ ಪ್ರವಾಹ ರಕ್ಷಣಾ ತಂಡ ಬೀಡು ಬಿಟ್ಟಿದ್ದು, ಸನ್ನದ್ಧ ಸ್ಥಿತಿಯಲ್ಲಿದೆ.

LEAVE A REPLY

Please enter your comment!
Please enter your name here