ಕೆದಂಬಾಡಿ ಒಕ್ಕೂಟದ ಸಭೆಯಲ್ಲಿ ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರ

0

ಅರಿಯಡ್ಕ: ಕೆದಂಬಾಡಿ ಗ್ರಾಮದ ಸಂಜೀವಿನಿ ಸಂಘದ ಒಕ್ಕೂಟ ಸಭೆಯು ಒಕ್ಕೂಟದ ಅಧ್ಯಕ್ಷರಾದ ವಿದ್ಯಾವತಿ ಇವರ ಅಧ್ಯಕ್ಷತೆಯಲ್ಲಿ ಜು.15 ರಂದು ನಡೆಯಿತು.
ಈ ಸಭೆಯಲ್ಲಿ ಕುಂಬ್ರ ಕಾಯಕಲ್ಪ ಆರೋಗ್ಯ ಧಾಮ ಇ ಎ ಸ್ಪೆಷಲಿಸ್ಟ್ ಲಕ್ಷ್ಮಣ ಕೆ ಇವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕೆದಂಬಾಡಿ ಪಂಚಾಯತ್ ಅಧ್ಯಕ್ಷೆ ಸುಜಾತ, ಒಕ್ಕೂಟದ ಕಾರ್ಯದರ್ಶಿ ಕವಿತಾ, ಎಂ ಬಿ ಕೆ ಶುಭಾ, ಎಲ್ ಸಿ ಆರ್ ಪಿ ಜಯಲತಾ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here