ಪುತ್ತೂರು: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸವಣೂರು ಕಡಬ ವಲಯ, ರೋಟರಿ ಕ್ಲಬ್ ಪುತ್ತೂರು, ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪುತ್ತೂರು, ಮಂಗಳೂರು, ಸವಣೂರು ಸಿ.ಎ ಬ್ಯಾಂಕ್, ಸವಣೂರು ಯುವಕ ಮಂಡಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ ಹಾಗೂ ಗ್ರಾಮ ಪಂಚಾಯತ್ ಸವಣೂರು ಇವರ ಜಂಟಿ ಸಹಯೋಗದಲ್ಲಿ ಜು.28ರಂದು ಸವಣೂರು ವಿನಾಯಕ ಸಭಾಭವನದಲ್ಲಿ ಜರಗಲಿದೆ. ಉಚಿತ ನೇತ್ರ ತಪಸಾಣೆ, ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್‍ಯಕ್ರಮದ ಅಮಂತ್ರಣ ಪತ್ರ ಬಿಡುಗಡೆಯು ಸವಣೂರಿನ ಜಿನ ಬಸದಿಯ ವಠಾರದಲ್ಲಿ ಜು.13ರಂದು ಜರಗಿತು. ಸಂಘಟನೆಯ ಪ್ರಮುಖರಾದ ಬಾಲಕೃಷ ರೈ. ದೇವಿಕಾ, ಪುಟ್ಟಣ್ಣ, ಅಕ್ಷತಾ, ವೆಂಕಪ್ಪ ಪೂಜಾರಿ, ಉಮೇಶ್ ಬೇರಿಕೆ, ವೇದಾವತಿ. ಗಿರಿಶಂಕರ್ ಸುಲಾಯ, ರಾಮಕೃಷ್ಣ ಪ್ರಭು, ವೆಂಕಪ್ಪ ಗೌಡ ಅಡೀಲು, ಕೀರ್ತನ್ ಕೋಡಿಬೈಲು, ಹರಿಣಾಕ್ಷಿ, ಸರಸ್ವತಿ, ಗೀತಾ, ಜಯಲಕ್ಷ್ಮಿ, ನಳಿನಾಕ್ಷಿ, ಕವಿತಾರವರುಗಳು ಉಪಸ್ಥಿತರಿದ್ದರು.