ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಪದವಿ ಪೂರ್ವ ಕಾಲೇಜು ಕುಂಬ್ರ ಇದರ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ದುವಾ ನೆರವೇರಿಸಿದರು.
ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಶೀರ್ ಇಂದ್ರಾಜೆ ಹಾಗೂ ಪದವಿ ವಿಭಾಗದ ಪ್ರಾಂಶುಪಾಲರಾದ ಮೊಹಮ್ಮದ್ ಮನ್ಸೂರ್ ಕಡಬ ಅವರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಪ್ರಾಂಶುಪಾಲೆ ಸಂಧ್ಯಾ ಪ್ರಮಾಣವಚನ ಬೋಧಿಸಿದರು.
ದ್ವಿತೀಯ ವಿಜ್ಞಾನ ವಿಭಾಗದ ಆಫ್ರ ಕೆ ಎ ಅಧ್ಯಕ್ಷೆ, ಇಫ್ಜ ಹಲೀಮ ಪ್ರ.ಕಾರ್ಯದರ್ಶಿ, ಮಿಸ್ಬಾ ಜೊತೆ ಕಾರ್ಯದರ್ಶಿ, ದ್ವಿತೀಯ ಕಲಾ ವಿಭಾಗದ ಜುಬಿರಿಯಾ ಶಮ್ನ ಡಿಸಿಪ್ಲಿನ್ ಮಿನಿಸ್ಟರ್, ಅಲೀಮಾ ತಸ್ಲೀಮಾ ಹೆಲ್ತ್ ಮಿನಿಸ್ಟರ್, ದ್ವಿತೀಯ ವಾಣಿಜ್ಯ ವಿಭಾಗದ ಫರ್ಹಾತ್ ಎಂ ಎ. ಎಜುಕೇಶನ್ ಮಿನಿಸ್ಟರ್, ಕೆ ಎ ನಿದಾ ಫಾತಿಮಾ ಸ್ಪೋರ್ಟ್ಸ್ ಮಿನಿಸ್ಟರ್, ಅಸ್ಮತ್ ಕಲ್ಚರಲ್ ಮಿನಿಸ್ಟರ್, ಫಾತಿಮಾತ್ ಸಜಿನ ಸಿ.ಎ ಸಾನಿಟೇಶನ್ ಮಿನಿಸ್ಟರ್, ಅಶಿಮಾ ಇಶ್ರತ್ ಕಮ್ಯುನಿಕೇಶನ್ ಮಿನಿಸ್ಟರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ದ್ವಿತೀಯ ವಿಜ್ಞಾನ ವಿಭಾಗದ ನಫೀಸತ್ ಮುಫೀಝ, ಫಾತಿಮಾತ್ ತಸ್ನಿಮ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕಿ ಪ್ರತಿಭಾ ರೈ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರ ನಡೆಯಿತು.
ಸಂಸ್ಥೆಯ ನೂತನ ಲೋಗೋವನ್ನು ಕೈ ಚಿತ್ರ ಮೂಲಕ ರಚನೆ ಮಾಡಿದ ದ್ವಿತೀಯ ಕಲಾ ವಿಭಾಗದ ಸಹೀದಾ ಪರಪ್ಪು ಮತ್ತು ಸಜಿನ ಸಿ.ಎ ಹೊಸಕೋಟೆರವರನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.