ಜು.19; ನಿಡ್ಪಳ್ಳಿ ದೇವಾಲಯದಲ್ಲಿ ಸಾಮೂಹಿಕ ತ್ರಿಕಾಲ ಪೂಜೆ

0

ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ  ಇಲ್ಲಿ ಸಾಮೂಹಿಕ ತ್ರಿಕಾಲ ಪೂಜೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜು.19 ರಂದು ನಡೆಯಲಿದೆ.

 ಪ್ರಾತ:ಕಾಲ ಗಂಟೆ 6 ಕ್ಕೆ ದೀಪಾರಾಧನೆ ಗಂಟೆ 7 ಕ್ಕೆ ಮಂಗಳಾರತಿ 8.15 ಕ್ಕೆ ಗಣಪತಿಹೋಮ ಮಧ್ಯಾಹ್ನ 12 ಕ್ಕೆ ತ್ರಿಕಾಲ ಪೂಜೆ, ಮಂಗಳಾರತಿ, ಮಧ್ಯಾಹ್ನ ಗಂಟೆ 12.30 ಕ್ಕೆ ಕ್ಷೇತ್ರ ಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

  ಸಂಜೆ ಗಂಟೆ  6 ರಿಂದ  ಅಷ್ಟಾವಧಾನ ಸೇವೆ ಆರಂಭ, ರಾತ್ರಿ ಗಂಟೆ 8 ಕ್ಕೆ ಮಹಾಪೂಜೆ,ರಾತ್ರಿ ಗಂಟೆ 8.30 ಕ್ಕೆ ಕ್ಷೇತ್ರ ಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here