ಪುತ್ತೂರು: ಇಲ್ಲಿನ ಪುಣಚ ಗ್ರಾಮದ ತೋರಣಕಟ್ಟೆಯಲ್ಲಿನ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆಯೊಂದನ್ನು ನಿರ್ಮಿಸಿ ಕೊಡುವ ಮೂಲಕ ಟೀಂ ಸತ್ಯಜಿತ್ ಸುರತ್ಕಲ್ ಹಾಗೂ ಬಿಲ್ಲವ ಬ್ರಿಗೇಡ್ ಮತ್ತು ಗ್ರಾಮದ ಜನತೆ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಜು.15ರಂದು ನೂತನವಾಗಿ ನಿರ್ಮಾಣಗೊಂಡ “ಶ್ರೀ ಗುರು ನಿಲಯ” ಇದರ ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಕನ್ಯಾನ ಕಣಿಯೂರು ಕ್ಷೇತ್ರದ ಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಇವರು ಕೀಲಿ ಕೈ ಯನ್ನು ಮನೆ ಯಾಜಮಾನಿ ಚಂದ್ರಾವತಿ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಇದರ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಹಿಸಿ ಮಾತನಾಡಿ, ಸಂಘಟನೆಯ ಕಾರ್ಯವೈಖರಿ ಮತ್ತು ಗ್ರಾಮದ ಜನರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಅವರು ಉಪಸ್ಥಿತರಿದ್ದು, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಪಡುಮಲೆ, ಜಯಂತ ಪೂಜಾರಿ ನಡುಬೈಲು, ಉದ್ಯಮಿ ಧನಂಜಯ್ ಪಟ್ಲ, ಅವಿನಾಶ್ ಬೊಳಂತಿಮೊಗೆರ್, ವಿಶ್ವನಾಥ ಪೂಜಾರಿ ಪುಣಚ, ಕೋಟ್ಯಾನ್ , ಪುರುಷೋತ್ತಮ್ ಸಜೀಪ ಹಾಗೂ ಕೀರ್ತನ್ ಕುಂಪಲ ಸಹಿತ ಕುಟುಂಬದ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.