ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಬ್ರಾಗ್ಸ್ ಮತ್ತು ಕಾರ್ಯದರ್ಶಿಯಾಗಿ ಕೇಶವ ಪಿ.ಎಂ., ಕೋಶಾಧಿಕಾರಿಯಾಗಿ ಸ್ವರ್ಣ ಪೊಸವಳಿಕೆ ಆಯ್ಕೆಯಾಗಿದ್ದು, ನೂತನ ತಂಡದ ಪದಪ್ರಧಾನ ಸಮಾರಂಭ ಜು.20ರಂದು ಸಂಜೆ 7ಕ್ಕೆ ಉಪ್ಪಿನಂಗಡಿಯ ದೀನರ ಕನ್ಯಾಮಾತೆ ದೇವಾಲಯದ ಚರ್ಚ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಬ್ರಾಗ್ಸ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರೋಟರಿ ಜಿಲ್ಲೆ 3181ರ ಜಿಲ್ಲಾ ಸಲಹೆಗಾರ ಬಿ. ಶೇಖರ ಶೆಟ್ಟಿಯವರು ಪದಪ್ರಧಾನ ನೆರವೇರಿಸಲಿದ್ದು, ಗೌರವ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಜಯರಾಮ ರೈ, ವಲಯ ಸೇನಾಸಿ ಗ್ರೇಸಿ ಗೊನ್ಸಾಲ್ವಿಸ್, ಮಾತ್ರ ಸಂಸ್ಥೆಯ ಡಾ. ಶ್ರೀಪತಿ ರಾವ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಂತಿನಗರ ಹೈಸ್ಕೂಲ್‌ಗೆ ಕಂಪ್ಯೂಟರ್ ವಿತರಣೆ ನಡೆಯಲಿದೆ. ಅಲ್ಲದೇ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚರಣ್ ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಎ. ಕನ್ನಡ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಸೌಜನ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ನೂತನ ತಂಡದ ದಂಡನಾಯಕರಾಗಿ ಪುರಂದರ ಬಾರ್ಲ, ನಿಯೋಜಿತ ಅಧ್ಯಕ್ಷರಾಗಿ ಕೆನ್ಯೂಟ್ ಮಸ್ಕರ‍್ಹೇನಸ್, ನಿರ್ದೇಶಕರಾಗಿ ಅಬ್ದುಲ್ ರಹಿಮಾನ್ ಯುನಿಕ್, ರವೀಂದ್ರ ದರ್ಬೆ, ಇಸ್ಮಾಯೀಲ್ ಇಕ್ಬಾಲ್, ವಿಜಯ ಕುಮಾರ್ ಕಲ್ಲಳಿಕೆ, ಸ್ವರ್ಣೇಶ್ ಗಾಣಿಗ, ಚೇರ್‌ಮೆನ್‌ಗಳಾಗಿ ಮುಹಮ್ಮದ್ ಸಮೀರ್, ಜಗದೀಶ್ ನಾಯಕ್, ಶ್ರೀಕಾಂತ ಪಟೇಲ್, ರಾಜೇಶ್ ದಿಂಡಿಗಲ್, ಡಾ. ಸುಪ್ರೀತಾ ರೈ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಕೇಶವ ಪಿ.ಎಂ., ಕೋಶಾಧಿಕಾರಿ ಸ್ವರ್ಣ ಪೊಸವಳಿಕೆ, ನಿಕಟಪೂರ್ವಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ನಿರ್ದೇಶಕ ಅಬ್ದುಲ್ ರಹಿಮಾನ್ ಯುನಿಕ್, ಚೇರ್‌ಮೆನ್‌ಗಳಾದ ಜಗದೀಶ್ ನಾಯಕ್, ಶ್ರೀಕಾಂತ್ ಪಟೇಲ್ ಉಪಸ್ಥಿತರಿದ್ದರು.