ನ್ಯಾಷನಲ್ ಆ್ಯಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ) ವಿಶಿಷ್ಟ ಶ್ರೇಣಿ ಪಡೆದ ವಿವೇಕಾನಂದ ಪಿಯು ಕಾಲೇಜಿನ ವಿಜ್ಞಾತ್ ಶೆಟ್ಟಿ

0

ಪುತ್ತೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸಿದ್ದ ರಾಜ್ಯಮಟ್ಟದ ನ್ಯಾಷನಲ್ ಆ್ಯಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಪುತ್ತೂರು ನೆಹರುನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿಜ್ಞಾತ್ ಶೆಟ್ಟಿ ರಾಜ್ಯಮಟ್ಟದಲ್ಲಿ 30 ನೆಯ ರ‍್ಯಾಂಕ್ ಪಡೆದು , ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಪರೀಕ್ಷಾ ತರಬೇತಿಯನ್ನು ಮಂಗಳೂರಿನ ಕಲಾ ವಿಷನ್ ಕೋಚಿಂಗ್ ಸೆಂಟರ್ ನಲ್ಲಿ ಪಡೆದಿರುವ ಇವರು, ಪಡೀಲ್ ವಿಘ್ನೇಶ್ವರ ಸ್ಟೀಲ್ ಆ್ಯಂಡ್ ಹಾರ್ಡ್ವೇರ್ ಇದರ ಮಾಲೀಕರಾದ ಸುಧೀರ್ ಶೆಟ್ಟಿ ತೆಂಕಿಲ ಮತ್ತು ಶಮಿತ ಶೆಟ್ಟಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here