ವಿವೇಕಾನಂದ ಕನ್ನಡ ಶಾಲೆಯಲ್ಲಿ ಜಿಲ್ಲಾ ಶಿಶುವಾಟಿಕ ಆಚಾರ್ಯ ಪ್ರಶಿಕ್ಷಣ ವರ್ಗ

0

ಪುತ್ತೂರು: ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಯೋಜಿಸಿದ ಅಖಿಲ ಭಾರತಿಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶಿಶುವಾಟಿಕ ಆಚಾರ್ಯ ಪ್ರಶಿಕ್ಷಣ ವರ್ಗವನ್ನು ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಇದರ ಅಧ್ಯಕ್ಷ ಅವಿನಾಶ್ ಕೊಡಂಕಿರಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆ ಬಳಿಕ ಮಾತನಾಡಿ ‘ ‘ಶಿಶುಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾತಾಜಿಯವರು ಅಧ್ಯಯನಶೀಲ ,ವಿವೇಚನಾ ಸಹಿತ, ವಿಮರ್ಶಾ ಗುಣವನ್ನು ಹೊಂದಿರಬೇಕು .ಶಿಕ್ಷಕರ ಈ ಮನೋವೃತ್ತಿಯು ಮಕ್ಕಳ ಕ್ರಿಯಾಶೀಲತೆಯನ್ನು ಪೋಷಿಸಲು ಸಹಕಾರಿಯಾಗಿದೆ. ಮನೆ -ಶಾಲೆ ಹಾಗೂ ವಾತಾವರಣ ಅವರ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಶಿಕ್ಷಣ ನೀಡುವ ಜವಾಬ್ದಾರಿ ನಮಗಿದೆ ಎಂದರು.

ವಿದ್ಯಾಭಾರತಿ ಕ್ಷೇತ್ರೀಯ ಶಿಶು ಶಿಕ್ಷಣ ಸಹ ಪ್ರಮುಖೆ ಬೆಂಗಳೂರಿನ ತಾರಾ, ವಿದ್ಯಾಭಾರತಿ ಕ್ಷೇತ್ರೀಯ ಕಾರ್ಯದರ್ಶಿ ವಸಂತ ಮಾಧವ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು .
ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದ ಪ್ರಾಂತ ಪ್ರಮುಖರಾದ ವೆಂಕಟರಮಣ ಮಂಕುಡೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ಸಂಚಾಲಕ ವಸಂತ ಸುವರ್ಣ ಕೋಶಾಧಿಕಾರಿಗಳಾದ ಅಶೋಕ ಕುಂಬ್ಳೆ ಉಪಸ್ಥಿತರಿದ್ದರು .


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಶಿಶುಮಂದಿರಗಳ ಶೈಕ್ಷಣಿಕ ಸ್ವರೂಪ ,ಪ್ರಶಿಕ್ಷಣದ ಅಗತ್ಯತೆ, ಪೋಷಕರ ಸಹಭಾಗಿತ್ವ ,ಭೌತಿಕ ವ್ಯವಸ್ಥೆಗಳ ಸುಸೂತ್ರ ನಿರ್ವಹಣೆಗಳ ಬಗ್ಗೆ ಸಂವಾದ ನಡೆಸಿದರು. ಶಿಶುಮಂದಿರಗಳ ಮೂಲಾಧಾರ ಪರಿಕಲ್ಪನೆಯನ್ನು ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೆ ದೃಷ್ಟಿಕರಿಸುವ ಕೈಂಕರ್ಯದಲ್ಲಿ ಕಾರ್ಯನಿರತವಾಗಿದ್ದು ನಮಗೆಲ್ಲ ಈ ನಿಟ್ಟಿನಲ್ಲಿ ಗುರುತರವಾದ ಜವಾಬ್ದಾರಿ ಇರುತ್ತದೆ. ಬಾಲ್ಯದಿಂದಲೇ ನಮ್ಮತನದ ಶಿಕ್ಷಣ ಧನಾತ್ಮಕ ವ್ಯಕ್ತಿತ್ವ ರೂಪಿಸಲು ಭದ್ರಬುನಾದಿಯಾಗಬೇಕು ಎಂದರು .


ಶಾಲಾ ಪ್ರೌಢ ವಿಭಾಗದ ಮುಖ್ಯ ಗುರು ಆಶಾ ಬೆಳ್ಳಾರೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಗಾರದಲ್ಲಿ ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿಗಳಾದ ರಮೇಶ್ ವಂದಿಸಿದರು. ಶಾಲಾ ಸಹ ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here