ವಿಟ್ಲ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಕೋಳಿ ಸಾಕಾಣೆ ಮಾಡುವ ಶೆಡ್ ಒಂದು ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ಜು.18ರ ತಡರಾತ್ರಿ ನಡೆದಿದೆ.

ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಅದರಲ್ಲಿ ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು. ಕೋಳಿಗಳು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಸುಮಾರು 700 ಕೋಳಿಗಳು ಮಾರಾಟವಾಗಿದ್ದವು.
ಜು.18ರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಶೆಡ್ಡನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.