





ಕಡಬ: ಎಡೆಬಿಡದೆ ಸುರಿದ ಮಳೆಗೆ ರಸ್ತೆ ಬದಿಯ ಧರೆ ಕುಸಿದು ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದ ಕಾರಣ ಹಲವು ವಿದ್ಯುತ್ ಕಂಬಗಳು ಹಾನಿಯಾದ ಘಟನೆ ಜು.19ರಂದು ಮುಂಜಾನೆ ಕಡಬ ಸಮೀಪದ ಪಣೆಮಜಲು ಬಳಿ ನಡೆದಿದೆ.
ಕಡಬ ಕಾಲೇಜು ರಸ್ತೆಯ ಮೂಲಕ ಹಾದು ಹೋಗಿ ಹೊಸಮಠ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಶಾಲೆಗೆ ಗಳಿಗೆ ರಜೆ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದು ಸಂಭಾವ್ಯ ಅಪಾಯ ತಪ್ಪಿದೆ.











