ಜು.21 ತೆಂಕಿಲದಲ್ಲಿ ಎಂಆರ್‌ಪಿಎಲ್‌ನ ರಿಟೇಲ್ ಔಟ್‌ಲೆಟ್ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

0

ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕ ಸಂಸ್ಥೆ ಒಎನ್‌ಜಿಸಿಯ ಅಂಗ ಸಂಸ್ಥೆಯಾದ ಎಂಆರ್‌ಪಿಎಲ್‌ನ ಹೈಕ್ಯೂ ರಿಟೇಲ್ ಔಟ್‌ಲೆಟ್ ‘ಮಹೇಶ್ವರ ಪೆಟ್ರೋಲಿಯಂ’ ಜು.21ರಂದು ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ಶುಭಾರಂಭಗೊಳ್ಳಲಿದೆ.


ಪೆಟ್ರೋಲಿಯಂ ಉತ್ಪನ್ನಗಳು ತಯಾರಾಗುವ ಒಎನ್‌ಜಿಸಿಯಿಂದ ನೇರವಾಗಿ ಔಟ್‌ಲೆಟ್‌ಗಳಿಗೆ ಸರಬರಾಜು ಆಗಲಿದೆ. ಕರ್ನಾಟಕದಲ್ಲಿ ಒಟ್ಟು 110 ಹೈಕ್ಯೂ ಔಟ್‌ಲೆಟ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ತಯಾರಿಕಾ ಸಂಸ್ಥೆಯಿಂದ ನೇರವಾಗಿ ಔಟ್‌ಲೆಟ್‌ಗಳಿಗೆ ಸಬರಾಜಾಗುತ್ತಿದ್ದು ಪರಿಶುದ್ಧತೆಯಿಂದ ಕೂಡಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶಾಲವಾದ ಪ್ರದೇಶದಲ್ಲಿ ಸಕಲ ಸೌಲಭ್ಯಗಳೊಂದಿಗೆ ಆಕರ್ಷಣೀಯವಾಗಿ ನಿರ್ಮಾಣಗೊಂಡಿದೆ. ಎಂಆರ್‌ಪಿಎಲ್ ಪೆಟ್ರೋಲ್ ಅನ್ನೇ ನೆಚ್ಚಿಕೊಂಡಿರುವ ವಾಹನ ಸವಾರರಿಗೆ ಇದು ಬಹಳಷ್ಟು ಅನುಕೂಲವಾಗಲಿದೆ.

ದಿನದ 24 ಗಂಟೆಯೂ ಸೇವೆ…!
ಎಂಆರ್‌ಪಿಎಲ್ ಪೆಟ್ರೋಲಿಯಂ ಪರಿಶುದ್ಧತೆಯಿಂದ ಕೂಡಿದ್ದು ಅಧಿಕ ಮೈಲೇಜ್ ದೊರೆಯಲಿದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ, ಉಚಿತ ನೈಟ್ರೋಜನ್ ಸೌಲಭ್ಯಗಳನ್ನು ಹೊಂದಿದೆ. ನಮ್ಮ ಪೆಟ್ರೋಲ್ ಬಂಕ್ ದಿನದ 24 ಗಂಟೆಯೂ ಗ್ರಾಹಕರಿಗೆ ಸೇವೆ ನೀಡಿಲಿದೆ ಎಂದು ಮ್ಹಾಲಕ ಶಿವಪ್ರಸಾದ್ ಶೆಟ್ಟಿ ಕಿನಾರ ತಿಳಿಸಿದ್ದಾರೆ.
ನೂತನ ಪಂಪ್‌ನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಕರ್ನಾಟಕ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಶ್ರೀಹರಿ ಪಿ., ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ವಿಭಾಗದ ಚೀಫ್ ರೀಜನ್ ಮ್ಯಾನೇಜರ್ ಸ್ವಾಮಿ ಪ್ರಸಾದ್, ಮಂಗಳೂರು ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿಯ ನಿರ್ದೇಶಕ ಮನಮೋಹನ ರೈ ಚೆಲ್ಯಡ್ಕ, ನಗರ ಸಭಾ ಸದಸ್ಯೆ ಯಶೋಧ ಪೂಜಾರಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಮೌಂಟನ್‌ವ್ಯೂ ಎಜುಕೇಶನಲ್ ಇನ್ಸ್ಟಿಟ್ಯೂಷನ್‌ನ ಚೆಯರ್‌ಮೆನ್ ಕೆ.ಪಿ ಅಹ್ಮದ್ ಹಾಜಿ, ಉದ್ಯಮಿ ವಲೇರಿಯನ್ ಡಯಾಸ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮ್ಹಾಲಕರಾದ ಸತೀಶ್ ಶೆಟ್ಟಿ ಕಿನಾರ ಸವಣೂರು, ಶಿವಪ್ರಸಾದ್ ಶೆಟ್ಟಿ ಕಿನಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here