‌ಮುಂಗಾರು ಕವಿಗೋಷ್ಠಿ – ಸಾಹಿತಿಗಳ ಅನುಭವ ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ – ಡಾ. ಹರ್ಷಕುಮಾರ್ ರೈ ಮಾಡಾವು ಅಭಿಮತ

0

ಪುತ್ತೂರು: ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ ದಕ್ಷಿಣ ಕನ್ನಡ ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಸಹಕಾರದಲ್ಲಿ, ಮುಂಗಾರು ಕವಿಗೋಷ್ಠಿ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯಲ್ಲಿ ಜು.17ರಂದು ನಡೆಯಿತು. ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲ ಗಣೇಶ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹರ್ಷಕುಮಾರ್ ರೈ ಮಾಡಾವು, ಚಿಗುರೆಲೆ ಸಾಹಿತ್ಯ ಬಳಗ ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆತು ಕನ್ನಡಪರ ಕೆಲಸ ಮಾಡುವುದಲ್ಲದೇ ಹಿರಿಯ ಕಿರಿಯ ಸಾಹಿತ್ಯ ಮನಗಳನ್ನ ಒಟ್ಟಿಗೆ ಸೇರಿಸಿಕೊಂಡು ಹೊಸ ಹೊಸ ಯೋಜನೆ, ಯೋಚನೆಗಳ ಮುಖೇನ ಬೇರೆ ಬೇರೆ ಊರಿನ ಸಾಹಿತಿಗಳಿಗೆ ವೇದಿಕೆ ಒದಗಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ದಿನ ಪತ್ರಿಕೆಯ ವರದಿಗಾರ ಮತ್ತು ಹಿರಿಯ ಸಾಹಿತಿ ಗಣೇಶ ಪ್ರಸಾದ್ ಪಾಂಡೇಲು, ಚಿಗುರೆಲೆ ಸಾಹಿತ್ಯ ಬಳಗದ ನಿರ್ವಾಹಕರಾದ ಕು. ಅಪೂರ್ವ ಕಾರಂತ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಬಳಿಕ ವಿಜಯನಗರದ ಶಿಕ್ಷಕಿ ಮತ್ತು ಯುವ ಕವಯತ್ರಿ ವೀರಮ್ಮ. ಕೆ ಸೋಗಿ ಅಧ್ಯಕ್ಷತೆಯಲ್ಲಿ ಮುಂಗಾರು ಕವಿಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಯೊಂದು ಕವಿಗಳ ಶೀರ್ಷಿಕೆಯನ್ನು ಕವಿತೆಯಾಗಿಸಿ ಮಾತನಾಡಿದ ವೀರಮ್ಮ, ಹಿರಿಯ ಕವಿಗಳ ಕೃತಿಗಳ ನಿರಂತರ ಅಧ್ಯಯನದಿಂದ ನಿಸರ್ಗಕ್ಕೆ ಹತ್ತಿರವಾಗಬೇಕು. ನಿಸರ್ಗವೇ ಪ್ರತಿಯೊಂದಕ್ಕೂ ಉತ್ತರ, ನಿಸರ್ಗದಂತೆ ನಾವೆಲ್ಲ ಕೂಡಿ ಬಾಳೋಣ ಎಂದು ಹೇಳಿದರು. ಹಿರಿಯ ಸಾಹಿತಿಗಳು ಮತ್ತು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಗೆ ಕವನ ವಾಚನ ಮಾಡುವ ಮೂಲಕ ಚಾಲನೆ ನೀಡಿದರು.

ವೇದಿಕೆಯಲ್ಲಿ ಎ. ವಿ. ಜಿ ಶಿಕ್ಷಣ ಸಂಸ್ಥೆಯ ಸಂಚಾಲಕರು ಮತ್ತು ಹಿರಿಯ ವಿದ್ವಾಂಸ ವೆಂಕಟ್ರಮಣ ಗೌಡ ಕಳುವಾಜೆ, ತುಳುಕೂಟ ಪುತ್ತೂರು ಇದರ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಉಪಸ್ಥಿತರಿದ್ದರು. ಕು. ತಶ್ವಿ ಶಾಂಭವಿ ಜೋಗಿಬೆಟ್ಟು ಪ್ರಾರ್ಥಿಸಿ, ಚಿಗುರೆಲೆ ಸಾಹಿತ್ಯ ಬಳಗದ ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಶಿಧರ್ ಏಮಾಜೆ ಮತ್ತು ಅಕ್ಷತಾ ನಾಗನಕಜೆ ಸಭಾ ಕಾರ್ಯಕ್ರಮ ನಿರ್ವಹಿಸಿ, ಯಶಸ್ವಿ ಗಣೇಶ್ ಸೋಮವಾರಪೇಟೆ ವಂದಿಸಿದರು. ಕವಿಗೋಷ್ಠಿಯಲ್ಲಿ, ಶಿರ್ಷಿತಾ ಕಾರಂತ್ ಅಳಿಕೆ, ಸುರೇಶ್ ಕುಮಾರ್ ಚಾರ್ವಾಕ, ಧನ್ವಿತಾ ಕಾರಂತ್ ಅಳಿಕೆ, ಕೇಶವ ನೆಲ್ಯಾಡಿ, ನವ್ಯ ಪ್ರಸಾದ್ ನೆಲ್ಯಾಡಿ, ಮಣಿ ಪಡ್ನೂರು, ಗಿರೀಶ್ ಉಪ್ಪಿನಂಗಡಿ, ಶ್ರೀಕಲಾ ಕಾರಂತ್ ಅಳಿಕೆ, ಶ್ರುತಿಕಾ ಓಜಾಲ, ಯಶಸ್ವಿ ಗಣೇಶ್ ಸೋಮವಾರಪೇಟೆ, ಜಯರಾಮ್ ಪಡ್ರೆ, ಚಂದ್ರಹಾಸ ಕುಂಬಾರ ಬಂದಾರು, ಸುನೀತಾ ಶ್ರೀರಾಮ್ ಕೊಯಿಲ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಮಂಜುಶ್ರೀ ನಲ್ಕ, ರಾಮಕೃಷ್ಣ ಉಪ್ಪಿನಂಗಡಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ನಾರಾಯಣ ನಾಯ್ಕ್ ಕುದ್ಕೊಳ್ಳಿ, ತಶ್ವಿ ಶಾಂಭವಿ, ತಸ್ಮಯ್ ಪಂಚೋಡಿ, ಕು. ಶ್ರೇಯ ಶೆಟ್ಟಿ, ಅಕ್ಷತಾ ನಾಗನಕಜೆ, ತನ್ಮಯ್ ಪಂಚೋಡಿ, ಮುಝಮಿಲ್ ಕರಾಯ, ಶಿಲ್ಪಾ. ಕೆ. ಎನ್., ಸಂಜೀವ ಮಿತ್ತಳಿಕೆ, ಆಶಾ ಅಡೂರ್, ಪ್ರತೀಕ್ಷಾ ಆರ್ ಕಾವು, ಧೃತಿ ಕಲ್ಲಾಜೆ ವಿಟ್ಲ, ಹರಿಣಾಕ್ಷಿ ಉಮೇಶ್ ನೇರಳಕಟ್ಟೆ, ಶಶಿಧರ್ ಏಮಾಜೆ, ಪ್ರತೀಕ್ಷಾ ಐತಾಳ್ ತಂಟೆಕ್ಕು, ಬಿಂಧ್ಯ ಕೆ. ಜೆ, ಐಶ್ವರ್ಯ ರೈ ನೆಲ್ಯಾಡಿ, ಪಾವನ ಜಿ ಪದ್ಯಾಣ, ಅಧೀಶ್ ಕೃಷ್ಣ ಅಡೂರ್, ಉಮಾಶಂಕರಿ ಮರಿಕೆ, ಫಾತಿಮತ್ ಜಸೀಲಾ ಕನ್ಯಾನ, ಪ್ರಜ್ಞಾ ಕೊಣಲೆ, ಮೋಕ್ಷ ಶಂಭೂರು, ಐಡಾ ಲೋಬೋ ಮಾಣಿ, ಪೂಜಾ ಪದ್ಯಾಣ, ಅಪೂರ್ವ ಕಾರಂತ್, ಲಕ್ಷ್ಮಿ ನಾರಾಯಣ ಮಾಣಿ ಭಾಗವಹಿಸಿದ್ದರು. ಕವಿಗೋಷ್ಠಿಯನ್ನು ಪ್ರಿಯಾ ಸುಳ್ಯ ಮತ್ತು ಆಶಾ ಅಡೂರ್ ನಿರೂಪಿಸಿದರು.

LEAVE A REPLY

Please enter your comment!
Please enter your name here