ಉಪ್ಪಿನಂಗಡಿ: ಗಮನಾರ್ಹ ಕುಸಿದ ನದಿ ನೀರಿನ ಮಟ್ಟ

0

ಉಪ್ಪಿನಂಗಡಿ: ಶುಕ್ರವಾರ ನೆರೆ ಭೀತಿಯನ್ನು ಮೂಡಿಸಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟವು ಶನಿವಾರದಂದು ಗಮನಾರ್ಹ ಕುಸಿತ ಕಂಡು ಸಮುದ್ರಮಟ್ಟಕ್ಕಿಂತ 27.3 ಎತ್ತರದಲ್ಲಿ ನದಿ ನೀರಿನ ಮಟ್ಟ ದಾಖಲಾಗಿದೆ.
ಶುಕ್ರವಾರ ರಾತ್ರಿಯಿಂದಲೇ ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದರ ಪರಿಣಾಮ ನದಿಯಲ್ಲಿನ ನೀರಿನ ಮಟ್ಟದಲ್ಲಿ ಕುಸಿತ ಕಾಣತೊಡಗಿತು. ಶನಿವಾರ ಸಾಯಂಕಾಲದ ವರೆಗೆ ಮಳೆ ಇಲ್ಲದ ಪರಿಣಾಮ ಒಂದೇ ಸವನೆ ಇಳಿಮುಖ ಕಂಡ ನದಿ ನೀರಿನ ಮಟ್ಟವು ಸಾಯಂಕಾಲದ ವೇಳೆ 27.3 ಮೀಟರ್ ನಷ್ಟಿತ್ತು. ಈ ಮೂಲಕ ಒಂದೇ ದಿನದಲ್ಲಿ 2.7 ಮೀಟರ್ ಕುಸಿತ ಕಂಡು ಬಂದಂತಾಗಿದೆ.

ಡಿಸಿ ಆದೇಶ ಅಪಾಯಕಾರಿ ಮರಗಳ ತೆರವು
ಶುಕ್ರವಾರ ಉಪ್ಪಿನಂಗಡಿ ಭೇಟಿ ನೀಡಿದ್ದ ದ.ಕ ಜಿಲ್ಲಾಧಿಕಾರಿಯವರ ಮುಂದೆ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಗ್ರಾಮದ ಕೆಲವಡೆ ಅಪಾಯಕಾರಿ ಮರಗಳ ತೆರವು ಕಾರ್ಯ ನಡೆದಿಲ್ಲ ಎಂದು ದೂರಿದ್ದರು. ಈ ಬಗ್ಗೆ ಸ್ಥಳದಲ್ಲಿಯೇ ಅರಣ್ಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿದ ಜಿಲ್ಲಾಧಿಕಾರಿಯವರು ಶನಿವಾರದಂದು ತನಗೆ ತೆರವು ಕಾರ್ಯಚರಣೆಯ ವರದಿ ಒಪ್ಪಿಸಬೇಕೆಂದು ನಿರ್ದೇಶನ ನೀಡಿದ್ದರು. ಅದರಂತೆ ಶನಿವಾರದಂದು ಪಂಚಾಯತ್ ಆಡಳಿತ ಸೂಚಿಸಿದ್ದ ಮರಗಳನ್ನು ಮತ್ತದರ ಗೆಲ್ಲುಗಳನ್ನು ಅರಣ್ಯ ಇಲಾಖಾ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆಸಲಾಯಿತು.

LEAVE A REPLY

Please enter your comment!
Please enter your name here