ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ (ಬಿ ಸಿ ಟ್ರಸ್ಟ್) ಪುತ್ತೂರು ಕುಂಬ್ರ ಎ ಒಕ್ಕೂಟದ ತ್ರೈಮಾಸಿಕ ಸಭೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರದಲ್ಲಿ ಒಕ್ಕೂಟದ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಲಯ ಮೇಲ್ವಿಚಾರಕಿ ಜಯಂತಿಯವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಶಶಿಕಲ ಪಿ ರೈಯವರು ವಾರದ ಸಭೆ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾಮಕೃಷ್ಣ ನಾಯ್ಕ್ ಮತ್ತು ಜೊತೆಕಾರ್ಯದರ್ಶಿ ರೇಖಾ ರೈ ಉಪಸ್ಥಿತರಿದ್ದರು. ಜವಾಬ್ದಾರಿ ತಂಡಗಳಾದ ಮಾತೃಭೂಮಿ ಮತ್ತು ನವಚೇತನ ಗುಂಪಿನ 2 ಅಧ್ಯಕ್ಷರುಗಳು ದೀಪ ಬೆಳಗಿಸಿ ತಮ್ಮ ಗುಂಪಿನ ವರದಿಗಳನ್ನು ಮಂಡಿಸಿದರು.
ಒಕ್ಕೂಟದ 31 ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದಾಖಲಾತಿ ಸಮಿತಿಯವರು ಗುಂಪಿನ ನಡವಳಿ ಪುಸ್ತಕಗಳನ್ನು ಪರಿಶೀಲಿಸಿದರು. ಒಕ್ಕೂಟದ ಕಾರ್ಯದರ್ಶಿ ರಾಜೀವಿ ಒಕ್ಕೂಟದ ವರದಿ ವಾಚಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ರಾಜೀವಿ ಕುಂಬ್ರ ಹಾಗೂ ರೇಖಾ ರೈ ಪರ್ಪುಂಜರವರನ್ನು ಹೂವು ಗುಚ್ಛ ನೀಡಿ ಗೌರವಿಸಲಾಯಿತು. ಬದ್ರುನ್ನಿಸಾ ಪರ್ಪುಂಜ ಸ್ವಾಗತಿಸಿ, ಪೂರ್ಣಿಮಾ ಪರ್ಪುಂಜ ವಂದಿಸಿದರು.