ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ 4ರ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪಾಲನಾ ಸಮಿತಿಯ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ನವೀನ್ ಬ್ರ್ಯಾಗ್ಸ್, ಕಾರ್ಯದರ್ಶಿಯಾಗಿ ಉದ್ಯಮಿ ಕೇಶವ್ ಪಿ.ಎಂ, ಕೋಶಾಧಿಕಾರಿಯಾಗಿ ಇಂಟೀರಿಯರ್ ಡಿಸೈನರ್ ಸ್ವರ್ಣ ಪೊಸವಳಿಕೆರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಅನುರಾಧಾ ಆರ್.ಶೆಟ್ಟಿ, ನಿಯೋಜಿತ ಅಧ್ಯಕ್ಷರಾಗಿ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ವಂದನಾ ಮುದಲಾಜೆ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಪುರಂದರ ಬಾರ್ಲ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಅಬ್ದುಲ್ ರಹಿಮಾನ್ ಯೂನಿಕ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ರವೀಂದ್ರ ದರ್ಬೆ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಇಸ್ಮಾಯಿಲ್ ಇಕ್ಬಾಲ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿಜಯಕುಮಾರ್ ಕಲ್ಲಳಿಕೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಸ್ವರ್ಣೇಶ್ ಗಾಣಿಗ, ಚೇರ್‌ಮ್ಯಾನ್‌ಗಳಾಗಿ ಮೊಹಮದ್ ಶಮೀರ್ ಬಿ(ಮೆಂಬರ್‌ಶಿಪ್), ಜಿ.ಜಗದೀಶ್ ನಾಯಕ್(ಟಿಆರ್‌ಎಫ್), ಶ್ರೀಕಾಂತ್ ಪಟೇಲ್(ಪಬ್ಲಿಕ್ ಇಮೇಜ್), ಅರುಣ್ ಕುಮಾರ್ ಕೆ(ಸಿಎಲ್‌ಸಿಸಿ/ವಿನ್ಸ್), ರಾಜೇಶ್ ದಿಂಡಿಗಲ್(ಜಿಲ್ಲಾ ಪ್ರಾಜೆಕ್ಟ್), ಡಾ.ಸುಪ್ರೀತ್ ನಿರಂಜನ್ ರೈ(ಪಲ್ಸ್ ಪೋಲಿಯೊ)ರವರು ಆಯ್ಕೆಯಾಗಿದ್ದಾರೆ.