ಕಬಕ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ, ಒಕ್ಕಲಿಗ ಸ್ವ – ಸಹಾಯ ಸಂಘಗಳ ಒಕ್ಕೂಟ ಕಬಕ, ಒಕ್ಕಲಿಗ ಸೇವಾ ಸಂಘ ಕಬಕ, ಒಕ್ಕಲಿಗ ಯುವ ಸಂಘ ಕಬಕ, ಒಕ್ಕಲಿಗ ಮಹಿಳಾ ಸಂಘ ಕಬಕ, ಇವರ ಸಹಕಾರದೊಂದಿಗೆ ಸಾಂಪ್ರದಾಯಿಕ ಭತ್ತದ ಸಸಿ ನಾಟಿ ಪ್ರಾತ್ಯಕ್ಷಿತೆ ಕಾರ್ಯಕ್ರಮ ಕಬಕ ತಿಮ್ಮಪ್ಪ ಗೌಡ ಶೇವಿರೆ ಇವರ ಕೃಷಿ ಗದ್ದೆಯಲ್ಲಿ ಜು 17 ರಂದು ನಡೆಯಿತು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮ ಅಂಗವಾಗಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವೆಂಕಟ್ರಮಣ ಗೌಡ ಕಳುವಾಜೆ ಸಾಂಪ್ರದಾಯಿಕ ಭತ್ತ ಸಸಿ ನಾಟಿ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ದಶಮಾನೋತ್ಸವದ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಪಟೇಲ್ ಚಾರ್ವಾಕ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ್, ಸ್ಥಾಪಕಾಧ್ಯಕ್ಷ ಎ ವಿ ನಾರಾಯಣ ಗೌಡ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ ರವಿ ಮುಂಗ್ಲಿಮನೆ , ಒಕ್ಕಲಿಗ ಗೌಡ ಮಹಿಳಾ ಸಂಘ ಪುತ್ತೂರು ಇದರ ಅಧ್ಯಕ್ಷ ವಾರಿಜ ಬೆಳ್ಯಪ್ಪ ಗೌಡ , ಯುವ ಸಂಘ ಪುತ್ತೂರು ಇದರ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಕಬಕ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಶೇವಿರೆ , ಕಬಕ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಗಣೇಶ್ ಗೌಡ , ಮಹಿಳಾ ಸಂಘದ ಅಧ್ಯಕ್ಷೆ ಗೀತಾ ಕೆ, ಪ್ರಧಾನ ಕಾರ್ಯದರ್ಶಿ ಲೇಖಾ ಗೋವರ್ಧನ್, ಕೋಶಾಧಿಕಾರಿ ಆಶಾಲತಾ, ತಾಲೂಕು ಮಹಿಳಾ ಸಂಘದ ಗೌರವಾಧ್ಯಕ್ಷೆ ಮೀನಾಕ್ಷಿ ಡಿ ಗೌಡ , ಒಕ್ಕಲಿಗ ಸಹಾಯ ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ , ಟ್ರಸ್ಟ್ ನ ದಶಮಾನೋತ್ಸವದ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ, ಉಪಾಧ್ಯಕ್ಷ ಲೋಕನಾಥ ಗೌಡ ಕಾಡಮನೆ, ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರಾದ ವೆಂಕಪ್ಪ ಗೌಡ ಕೆಯ್ಯುರು , ಜಿನ್ನಪ್ಪ ಗೌಡ ಮಳುವೇಲು , ನಾಗಪ್ಪ ಗೌಡ ಬೊಮ್ಮೆಟ್ಟಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಾಲ ಉಸ್ತುವಾರಿ ಶ್ರೀಧರ ಗೌಡ ಕಣಜಾಲು, ಟ್ರಸ್ಟ್ ನ ಸಿಬ್ಬಂದಿ ವರ್ಗ,ಗ್ರಾಮದ ಗಣ್ಯರು ಮತ್ತು ಕಬಕ, ಬಲ್ನಾಡು, ಕೊಡಿಪ್ಪಾಡಿ, ಬನ್ನೂರು ಮತ್ತು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಸಭಾ ಕಾರ್ಯಕ್ರಮವನ್ನು ಟ್ರಸ್ಟ್ ಪ್ರೇರಕಿ ನಮಿತಾ ಸ್ವಾಗತಿಸಿ, ಕಚೇರಿ ಮೆನೇಜರ್ ಸುನೀಲ್ ವಂದಿಸಿದರು.ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಮಾಹಿತಿ ಕಾರ್ಯಕ್ರಮದ ಬಳಿಕ ಗದ್ದೆಯಲ್ಲಿ ಸಾಂಪ್ರದಾಯಕ ಭತ್ತ ಸಸಿ ನಾಟಿ ಕಾರ್ಯಕ್ರಮ ನಡೆಯಿತು.ದಮಯಂತಿ ಮುತ್ತಪ್ಪ ಗೌಡ ಕಾಂತಿಲ ಬಲ್ನಾಡು, ವಾಸಪ್ಪ ಗೌಡ ಕೊಡಿಪ್ಪಾಡಿ ಪಾರ್ದನ (ಸಂಧಿ ) ಹಾಡನ್ನು ಸಸಿ ನಾಟಿ ಸಂದರ್ಭ ಹಾಡಿದರು. ಕಬಕ ಒಕ್ಕಲಿಗ ಗೌಡ ಸೇವಾ ಸಂಘ ಗ್ರಾಮ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಶೇವಿರೆ ಹಾಗೂ ಇವರ ಮನೆಯವರ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.