ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಕ್ಲಸ್ಟರ್ ವತಿಯಿಂದ ರಕ್ತದಾನ ಶಿಬಿರ

0

ಪುತ್ತೂರು: ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದರೊಂದಿಗೆ ಸಮಾಜದಲ್ಲಿ ಅಹಿತಕರ ಘಟನೆಗಳು ಕಾರಣವಾಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಕ್ಲಸ್ಟರ್ ವತಿಯಿಂದ ಮುಂಡೂರು ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಬ್ಲಡ್ ಹೆಲ್ಫ್ ಲೈನ್ ಹಾಗು ಯೆನಪೋಯ ಆಸ್ಪತ್ರೆ ಇದರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಹಾಗು ಮಾದಕ ವ್ಯಸನ ವಿರುದ್ದ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಮಾಜದ ಯುವ ಸಮೂಹ ಮಾದಕ ವಸ್ತು ಸೇವನೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ, ಮಾದಕ ದ್ರವ್ಯ ವ್ಯಸನಿಯಾದ ವ್ಯಕ್ತಿಯನ್ನು ಕುಟುಂಬ ಹಾಗು ಸಮಾಜ ಧಿಕ್ಕರಿಸುತ್ತದೆ.
ಯುವಕರು, ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನಿಗಳಾಗದೆ ಸಮಾಜಕ್ಕೆ ಒಳಿತನ್ನು ಬಯಸುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಉಪಯೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈ ಸಮಾಜ ಹಾಗು ಎಸ್ಕೆಎಸ್ಸೆಸ್ಸೆಫ್ ನಂತಹ ಸಂಘಟನೆಗಳು ಸದಾ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಸಭೆಯ ಅದ್ಯಕ್ಷತೆಯನ್ನು ರೆಂಜಲಾಡಿ ಕ್ಲಸ್ಟರ್ ಅದ್ಯಕ್ಷರಾದ ಮಹಮ್ಮದ್ ಅಝರುದ್ದೀನ್ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಸಂದೇಶ ಭಾಷಣ ಮಾಡಿದರು.
ಮುಂಡೂರು ಮಸೀದಿ ಖತೀಬರಾದ ಆಸಿಫ್ ಫೈಝಿಯವರು ಪ್ರಾರ್ಥನೆಗೆ ನೇತೃತ್ವ ನೀಡಿ ಶುಭಹಾರೈಸಿದರು. ಮುಂಡೂರು ಮಸೀದಿ ಅದ್ಯಕ್ಷರಾದ ಯಾಕೂಬ್ ಮುಲಾರ್ , ಮುಕ್ವೆ ಮಸೀದಿ ಅದ್ಯಕ್ಷರಾದ ಇಬ್ರಾಹಿಂ ಮುಲಾರ್ ಶುಭ ಹಾರೈಸಿ ಮಾತನಾಡಿದರು.

ವಲಯ ಅದ್ಯಕ್ಷರಾದ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ , ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ , ಅಜ್ಜಿಕಟ್ಟೆ ಜುಮಾ ಮಸೀದಿ ಅದ್ಯಕ್ಷರಾದ ಅಬೂಬಕರ್ ಮುಲಾರ್ , ಹಿರಿಯರಾದ ಅಬ್ದುಲ್ ರಹಿಮಾನ್ ಹಾಜಿ , ಮುಂಡೂರು ಮಸೀದಿ ಉಪಾದ್ಯಕ್ಷರಾದ ಮಹಮ್ಮದ್ ಮುಂಡೂರು , ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಪರಾಡ್ , ಜಿಲ್ಲಾ ವಿಖಾಯ ರಕ್ತದಾನಿ ಬಳಗ ಉಸ್ತುವಾರಿ ಇಬ್ರಾಹಿಂ ಕಡವ , ಉದ್ಯಮಿ ಇಬ್ರಾಹಿಂ ಅಜ್ಜಿಕಲ್ಲು , ಬ್ಲಡ್ ಹೆಲ್ಫ್ ಲೈನ್ ಕರ್ನಾಟಕ ಕಾರ್ಯ ನಿರ್ವಾಹಕ ರಿಯಾಝ್ ಹಾಗು ಅಲಿ ಪರ್ಲಡ್ಕ , ಉದ್ಯಮಿ ಇಬ್ರಾಹಿಂ ಪಟ್ಟೆ , ಉದ್ಯಮಿ ಇಸ್ಹಾಕ್ ರೆಂಜಲಾಡಿ , ಎಸ್ಕೆಎಸ್ಸೆಸ್ಸೆಫ್ ಮುಂಡೂರು ಯುನಿಟ್ ಅದ್ಯಕ್ಷರಾದ ಅಶ್ರಫ್ ಮುಲಾರ್, ರೆಂಜಲಾಡಿ ಯುನಿಟ್ ಅದ್ಯಕ್ಷರಾದ ಅಝೀಝ್ ರೆಂಜಲಾಡಿ , ಉದ್ಯಮಿಗಳಾದ ಶರೀಫ್ ಎಲಿಯ, ಶರೀಫ್ ಅಜ್ಜಿಕಲ್ಲು, ವಲಯ ವಿಖಾಯ ರಕ್ತದಾನಿ ಬಳಗ ಉಸ್ತುವಾರಿ ಹಾರಿಸ್ ತ್ಯಾಗರಾಜೆ , ಅನಿವಾಸಿ ಉದ್ಯಮಿ ಹಾಜಿ ಆಶಿರ್ ನಂಜೆ , ಉದ್ಯಮಿ ಪಿ.ಕೆ. ಮಹಮ್ಮದ್ , ಅನಿವಾಸಿ ಉದ್ಯಮಿ ಆಸಿಫ್ ರೆಂಜಲಾಡಿ , ಉದ್ಯಮಿ ಇಮ್ರಾನ್ ಮಲ್ನಾಡ್ , ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ನೌಶಾದ್ ಕಳಂಜ , ಉದ್ಯಮಿ ನಾಸಿರ್ ಅಜ್ಜಿಕಲ್ಲು , ಉದ್ಯಮಿ ಸಾದಿಕ್ ಬಾಳಾಯ , ವಲಯ ಸರ್ಗಾಲಯ ಚೆಯರ್ಮೇನ್ ನೌಫಲ್ ಅಜ್ಜಿಕಲ್ಲು , ಉದ್ಯಮಿ ನಾಸಿರ್ ಸೊರಕೆ , ಅನಿವಾಸಿ ಉದ್ಯಮಿ ಉಮ್ಮರ್ ಸುಲ್ತಾನ್ , ಮುಂಡೂರು ಯುನಿಟ್ ನಾಯಕರಾದ ಮುಸ್ತಫಾ ಮುಂಡೂರು , ಯಾಕೂಬ್ ಮುಂಡೂರು , ಅಫೀಝ್ ಮುಂಡೂರು ಉಪಸ್ಥಿತರಿದ್ದರು.

ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿ , ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ ರೆಂಜಲಾಡಿ ವಂದಿಸಿದರು.

LEAVE A REPLY

Please enter your comment!
Please enter your name here