ಜು.25ರಂದು ಏರಿಕೆಗೊಂಡ ನದಿಗಳ ನೀರಿನ ಮಟ್ಟ-1974ರ ನೆರೆಗೆ 50 ವರ್ಷ

0

ಉಪ್ಪಿನಂಗಡಿ: ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಗುರುವಾರ ಮಧ್ಯಾಹ್ನದಿಂದ ಏರಿಕೆ ಕಂಡಿದ್ದು, 28.05 ಮೀಟರ್ ಮಟ್ಟದಲ್ಲಿ ನದಿಗಳು ಹರಿಯುತ್ತಿದೆ.


ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾದ ಕಾರಣದಿಂದಾಗಿ ಜು.24ರಂದು 27.01 ಇದ್ದ ನದಿಗಳ ನೀರಿನ ಮಟ್ಟ ಗುರುವಾರ ಮಧ್ಯಾಹ್ನದ ಬಳಿಕ 28.05 ಮೀಟರ್‌ಗೆ ಏರಿಕೆಯಾಗಿತ್ತು. ಇಲ್ಲಿನ ಅಪಾಯದ ಮಟ್ಟ 31.05 ಆಗಿದೆ. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ನಾನ ಘಟ್ಟದ ಬಳಿ ನೇತ್ರಾವತಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ ಗುರುವಾರ ಮಧ್ಯಾಹ್ನದ ಬಳಿಕ 10 ಮೆಟ್ಟಿಲುಗಳಷ್ಟೇ ಕಾಣುತ್ತಿತ್ತು. ಉಪ್ಪಿನಂಗಡಿಯಲ್ಲಿ ನಿರಂತರ ಮಳೆಯಿಲ್ಲದಿದ್ದರೂ, ಆಗಾಗ ಜೋರಾಗಿ ಗಾಳಿ- ಮಳೆಯಾಗುತ್ತಿದೆ. ನೇತ್ರಾವತಿ ನದಿಗಿಂತ ಕುಮಾರಧಾರ ನದಿಯಲ್ಲಿ ನೀರ ಹರಿವು ನಿನ್ನೆ ಹೆಚ್ಚಿದೆ.


1974ರ ನೆರೆಗೆ 50 ವರ್ಷ:
ಲಭ್ಯ ಮಾಹಿತಿಯ ಪ್ರಕಾರ 1923ರಲ್ಲಿ ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ಪ್ರವಾಹ ಬಂದಿತ್ತು. ಆ ಬಳಿಕ ಅತೀ ದೊಡ್ಡ ಪ್ರವಾಹ 26-07-1974ರದ್ದಾಗಿದೆ. ಈ ಪ್ರವಾಹ ಬಂದು ಇಂದಿಗೆ 50 ವರ್ಷವಾಯಿತು. ಅಂದಿನಂತೆ ಈ ಬಾರಿಯೂ 26ನೇ ತಾರೀಕು ಶುಕ್ರವಾರ ಬಂದಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here