ಸುತ್ತಿಕೊಂಡ ಬಳ್ಳಿಯಿಂದ ವಿದ್ಯುತ್ ಕಂಬಗಳೇ ಮಾಯ-ಕುಂಬ್ರ, ಕೌಡಿಚ್ಚಾರು, ಕಾವು ರಸ್ತೆಬದಿಯಲ್ಲಿ ಜೀವಕ್ಕೆ ಕುತ್ತಾಗುವ ಸ್ಥಿತಿ

0

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯ ಕುಂಬ್ರ, ಕೌಡಿಚ್ಚಾರು, ಕಾವು ಪರಿಸರದಲ್ಲಿ ರಸ್ತೆಬದಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗಳಿಗೆ ಗಿಡ, ಬಳ್ಳಿಗಳು ಸುತ್ತಿಕೊಂಡಿದ್ದು ವಿದ್ಯುತ್ ಅಪಾಯವನ್ನು ಸೃಷ್ಟಿಸಿದೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ, ಕೌಡಿಚ್ಚಾರು, ಕಾವು ರಸ್ತೆ ಬದಿಯಲ್ಲಿರುವ ಎಚ್‌ಟಿ ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗಳಿಗೆ, ಮರ, ಬಳ್ಳಿಗಳು ಹರಡಿ ಮಳೆಗಾಲದ ಸಮಯದಲ್ಲಿ ಅಪಾಯವನ್ನು ತಂದೊಡ್ಡಿದೆ. ರಸ್ತೆ ಬದಿಯ ಎಲ್ಲಾ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಹರಡಿ ಕೊಂಡಿದೆ. ಬಳ್ಳಿ ಹರಡಿದ ಕಾರಣ ವಿದ್ಯುತ್ ಕಂಬಗಳೇ ಮಾಯವಾಗಿದೆ. ಬಳ್ಳಿಗಳು ಕಂಬಗಳಿಗೆ ಹರಡುವುದರ ಮೂಲಕ ಅದರ ಸ್ಟೇ ತಂತಿಗಳಿಗೂ ನೆಲದವರೆಗೆ ಹಬ್ಬಿದೆ. ಇಂತಹ ಬಳ್ಳಿಗಳಿಗೆ ಹೊಂದಿಕೊಂಡು ಹತ್ತಿರದ ಕೃಷಿಕರ ಅಡಿಕೆ ಮರಗಳು ಹಾಗೂ ಇತರ ಮರಗಳು ಇವೆ. ಮಳೆಗಾಲದ ಸಮಯದಲ್ಲಿ ಇಂತಹ ಮರ ಗಿಡಗಳನ್ನು ಸಾರ್ವಜನಿಕರು ಅಥವಾ ಕೃಷಿಕರು ಮುಟ್ಟಿದರೆ ಜೀವಕ್ಕೆ ಕುಂದಾಗುವುದು ಗ್ಯಾರಂಟಿ. ಮೆಸ್ಕಾಂನವರು ಈ ಬಗ್ಗೆ ಗಮನಹರಿಸಿ ರಸ್ತೆ ಬದಿಯ ಮರ ಗಿಡ ಬಳ್ಳಿಗಳನ್ನು ತೆರವು ಮಾಡಿ ಜೀವ ಹಾನಿಯನ್ನು ತಪ್ಪಿಸಬೇಕು ಎಂದು ಸಾರ್ವಜನಿರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here