ಮೈಸೂರಿನಲ್ಲಿ ನಡೆದ 2ನೇ ಅಂತರ್ರಾಷ್ಟ್ರೀಯ ಕಲೆಮನೆ ಭರತನಾಟ್ಯ ಸ್ಪರ್ಧೆ- ಆಂಗಿಕಾ ಶೆಟ್ಟಿ ದ್ವಿತೀಯ

0

ಪುತ್ತೂರು: ಕುಮಾರ್ ಫರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಮೈಸೂರು ಇವರು ಅರ್ಪಿಸಿದ 2ನೇ ಅಂತರ್ರಾಷ್ಟ್ರೀಯ ಕಲೆಮನೆ ಭರತನಾಟ್ಯ ಸ್ಪರ್ಧೆಯು ಇತ್ತೀಚೆಗೆ ಮೈಸೂರಿನ ಕಲೆಮನೆ ಸಭಾಂಗಣದಲ್ಲಿ ಜರಗಿದ್ದು, ಈ ಸ್ಪರ್ಧೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ನೃತ್ಯ ಸಂಸ್ಥೆಯಾಗಿರುವ ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಇದರ ವಿದ್ಯಾರ್ಥಿನಿ ಆಂಗಿಕಾ ಶೆಟ್ಟಿಯವರು ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರು ವಿದುಷಿ ನಯನಾ ವಿ.ರೈಯವರ ಮೊಮ್ಮಗಳಾಗಿದ್ದು, ವಿದುಷಿ ಸ್ವಸ್ತಿಕ ಆರ್.ಶೆಟ್ಟಿ ಹಾಗೂ ರಾಜ್‌ಕುಮಾರ್ ಶೆಟ್ಟಿಯವರ ಪುತ್ರಿ. ಪ್ರಸ್ತುತ ಇವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here