ಎಡಕುಮೇರಿ ಬಳಿ ರೈಲ್ವೇ ಹಳಿ ಕೆಳಗಡೆ ಮಣ್ಣು ಕುಸಿತ: ಮಂಗಳೂರು-ಪುತ್ತೂರು-ಬೆಂಗಳೂರು ರೈಲು ಬಂದ್

0

ಪುತ್ತೂರು:ಎಡಕುಮೇರಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಎಡಕುಮೇರಿ ಸಮೀಪದ ಕಡಗರವಳ್ಳಿ ನಡುವೆ ಜು.೨೬ರಂದು ರೈಲು ಹಳಿಯ ಕೆಳ ಭಾಗದಲ್ಲಿ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಪುತ್ತೂರು ಆಗಿ ಬೆಂಗಳೂರಿಗೆ ತೆರಳುವ ರೈಲು ಸಂಚಾರ ಸ್ಥಗಿತಗೊಂಡು ಬದಲಿಯಾಗಿ ಮಂಗಳೂರಿನಿಂದ ಕೇರಳ ಮಾರ್ಗವಾಗಿ ಬೆಂಗಳೂರು ರೈಲು ಸಂಚಾರ ಆರಂಭಗೊಂಡಿದೆ.
ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಮುಂದೆ ಎಡಕುಮೇರಿ ಮತ್ತು ಕಡಗರಹಳ್ಳಿ ನಡುವೆ ರೈಲು ಹಳಿಯ ಕೆಳಗಡೆ ಮಣ್ಣು ಕುಸಿದ ಹಿನ್ನೆಲೆಯಲ್ಲಿ ತಕ್ಷಣ ರೈಲ್ವೇ ಇಲಾಖೆಯು ಈ ಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ.

ಹಾಗಾಗಿ ಈ ಭಾಗದಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.ಈ ನಡುವೆ ವಿಜಯಪುರಕ್ಕೆ ತೆರಳುತ್ತಿದ್ದ ರೈಲು ಎಡಕುಮೇರಿಯಿಂದ ವಾಪಸಾಗಿ ಸದ್ಯ ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಲ್ಲಿ ನಿಂತಿದೆ.ಅಲ್ಲಿ ಪ್ರಯಾಣಿಕರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ ಬಳಿಕ ಪುತ್ತೂರಿಗೆ ಆಗಮಿಸಲಿರುವ ರೈಲು ಮುಂದೆ ಸುರತ್ಕಲ್ ಹುಬ್ಬಳ್ಳಿ ಮೂಲಕ ವಿಜಯಪುರಕ್ಕೆ ತೆರಳಲಿದೆ ಎಂದು ರೈಲ್ವೇ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಕೇರಳ ಮೂಲಕ ಬೆಂಗಳೂರಿಗೆ:
ಬೆಂಗಳೂರಿಗೆ ತೆರಳುವ ರೈಲು ಮಂಗಳೂರು ಕೇರಳ ಮೂಲಕ ಬೆಂಗಳೂರಿಗೆ ತೆರಳಲಿದೆ.ಹಾಗಾಗಿ ಪುತ್ತೂರಿನಿಂದ ಬೆಂಗಳೂರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಮಾಡಿದವರಿಗೆ ಟಿಕೆಟ್ ಹಿಂತಿರುಗಿಸಲಾಗಿದೆ ಎಂದು ರೈಲ್ವೇ ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here