





ಈಶ್ವರಮಂಗಲ :ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.26ರಂದು ಜುಲೈ ತಿಂಗಳಲ್ಲಿ ಜನಿಸಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು .


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಮಿತಾ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಹುಟ್ಟುಹಬ್ಬ ಆಚರಿಸಿದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ಕೆ ಶಾಮಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು. ಮಕ್ಕಳಿಗೆ ತಿಲಕ ಇಟ್ಟು ಕಿರು ಕಾಣಿಕೆಯನ್ನು ನೀಡಲಾಯಿತು.






ಶಿಕ್ಷಕಿಯರಾದ ಅಕ್ಷತಾ,ಭವ್ಯ ಮತ್ತು ಗುಣಶ್ರೀ ಇವರು ಮಕ್ಕಳಿಗೆ ಆರತಿ ಬೆಳಗಿದರು. ವಿದ್ಯಾರ್ಥಿನಿಯರಾದ ರಿಯಾ ಮತ್ತು ತಂಡದವರು ಪ್ರಾರ್ಥಿಸಿದರು. ಶ್ರಿಯಾ ಜಿ ಎ ಕಾರ್ಯಕ್ರಮ ನಿರೂಪಣೆ ಮಾಡಿದರು.









