ಜು.29: ಎಡನೀರು ಮಠದಲ್ಲಿ ಸತ್ಯಶಾಂತಾ ಪ್ರತಿಷ್ಠಾನದಿಂದ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ಟರಿಗೆ ಪ್ರಶಸ್ತಿ ಪ್ರದಾನ

0

ಪುತ್ತೂರು: ಪುತ್ತೂರಿನ ಸತ್ಯ ಶಾಂತ ಪ್ರತಿಷ್ಠಾನದ ವತಿಯಿಂದ ತೆಂಕುತಿಟ್ಟಿನ ಕಂಚಿನ ಕಂಠದ ಖ್ಯಾತ ಯಕ್ಷಗಾನ ಕಲಾವಿದ ತಲೆಂಗಳ ಶಂಭಟ್ಟ ಪಾರ್ವತಿ ದಂಪತಿ ಸ್ಮರಣಾರ್ಥ‌ ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ಟರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜು.29ರಂದು ಸಂಜೆ ಎಡನೀರು ಮಠದ ಶ್ರೀ ಭಾರತೀ ಕಲಾಸದನದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತ ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ಮಕ್ಕಳಿಂದ ರಾಜಾ ದಿಲೀಪ ಅಗ್ರಪೂಜೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.


ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿ ಆಶೀರ್ವಚನ ನೀಡಲಿದ್ದು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಭಾರ್ಯ, ಪುತ್ತೂರು ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ವಕ್ತಾರ ವಿಷ್ಣು ಪ್ರಸಾದ್ ಬರೆಕರೆ ಮತ್ತು ಜ್ಯೋತಿಷಿ ಕೃಷ್ಣ ಮೂರ್ತಿ ಪುದುಕೋಳಿ ಭಾಗವಹಿಸಲಿದ್ದಾರೆ ಎಂದು ಸತ್ಯ ಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿ ತಿಳಿಸಿದ್ದಾರೆ.

ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿ ಅವರು ಮಠದಲ್ಲಿ ಬಿಡುಗಡೆಗೊಳಿಸಿದರು. ಶಾಂತಾ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here