ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಚುಟುಕು, ಕವನ, ಸಾಹಿತ್ಯ ರಚನಾ ಕಮ್ಮಟ ಕವಿಗೋಷ್ಠಿ ಕಾರ್ಯಕ್ರಮ

0

ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು: ಶಾಂತಾ ಪುತ್ತೂರು

ವಿಟ್ಲ: ಈ ಸಮಯ ನಿಮಗೆ ಅನುಕೂಲವಾಗಿದೆ, ಇಲ್ಲಿ ವಾಚಿಸಿದ ಪ್ರತಿಯೊಬ್ಬರ ಕವನಗಳೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕೆಂದು ಸರಕಾರಿ ಪ್ರೌಢ ಶಾಲೆ ಕಬಕದ ಕನ್ನಡ ಭಾಷಾ ಶಿಕ್ಷಕಿ, ದ. ಕ. ಜಿಲ್ಲಾ ಬರಹಗಾರ ಸಂಘದ ಉಪಾಧ್ಯಕ್ಷೆ ಶಾಂತಾ ಪುತ್ತೂರುರವರು ಹೇಳಿದರು.

ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ – ದ.ಕ.ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ನಡೆದ ಸಾಹಿತ್ಯ ರಚನಾ ಕಮ್ಮಟ – ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಫಿಲೋಮಿನಾ ಐಡಾ ಲೋಬೋರವರು ಮಾತನಾಡಿ ಸಾಹಿತ್ಯ ಒಂದು ವರ, ನೀವು ಪುಣ್ಯವಂತರು ನಿಮ್ಮ ಕೀರ್ತಿ ಬೆಳಗಲಿ ಎಂದು ಶುಭ ಹಾರೈಸಿದರು.
ದ.ಕ.ಜಿಲ್ಲಾ ಬರಹಗಾರ ಸಂಘದ ಅಧ್ಯಕ್ಷರಾದ ಜಯಾನಂದ ಪೆರಾಜೆ ಮಕ್ಕಳಿಗೆ ಸಾಹಿತ್ಯ ರಚನೆ ತರಬೇತಿ ನೀಡಿದರು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಹನ್ಸಿಕಾ ಎಸ್.ಪೂಜಾರಿ, ಪೂರ್ವಿಕಾ ಭಾರದ್ವಾಜ್, ಭುವಿಕ ಎಸ್. ಡಿ., ಸೂರ್ಯ ಎಸ್.ಆರ್.ಪಂಡಿತ್ ,ಅಕ್ಷರ ಜೆ.ಶೆಟ್ಟಿ, ಕರ್ನಾಟಕ ಪ್ರೌಢ ಶಾಲೆಯ ಜಮೀಹ, ಮರ್ಯಮ್ ಸ್ವಾಬಿರಾ, ಫಾತಿಮತ್ ಅಮಾನ, ಶ್ರಾವ್ಯ ಮತ್ತು ಹಿರಿಯ ವಿಭಾಗದಲ್ಲಿ ಆಕಾಶವಾಣಿ ಕಲಾವಿದರಾದ ದಾ. ನಾ. ಉಮಣ್ಣ ಕೊಕ್ಕಪುಣಿ, ಫಿಲೋಮಿನಾ ಐಡಾ ಲೋಬೋ, ಶ್ಯಾಮಲಾ ಕೆ, ಜಯರಾಮ ಕಾಂಚನ ಕವನ ವಾಚನ ಮಾಡಿದರು.

ಕಮ್ಮಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ಹಾಗೂ ಕವನ ವಾಚಿಸಿದ ಹಿರಿಯ – ಕಿರಿಯ ಕವಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ಚೆನ್ನಪ್ಪ ಗೌಡ, ಶ್ರೀರಾಮ ಪ್ರೌಢ ಶಾಲಾ ಶಿಕ್ಷಕಿ ಪ್ರಜ್ಞಾ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ – ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಜಯರಾಮ ಕಾಂಚನ ಸ್ವಾಗತಿಸಿ ಹಿರಿಯ ಕನ್ನಡ ಶಿಕ್ಷಕಿ ಶ್ಯಾಮಲಾ ಕೆ. ವಂದಿಸಿ, ವಿದ್ಯಾರ್ಥಿನಿಯರಾದ ಜಮೀಹ ಮತ್ತು ಮರ್ಯಂ ಸ್ವಾಬಿರಾ ಕಾರ್ಯಕ್ರಮ ನಿರೂಪಿಸಿ, ಶಾಲಾ ನಾಯಕ ಎಸ್.ಅಬ್ದುಲ್ ರಹೀಂ,ಮ.ಹಫೀಝ್, ವಿಶಾಲ್ ,ಬಾಶಿತ್ ಸಹಕರಿಸಿದರು.

LEAVE A REPLY

Please enter your comment!
Please enter your name here