ಅಂಕತಡ್ಕ: ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಸ್ಮಾರಕಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಮಾಲಾರ್ಪಣೆ

0

ಸವಣೂರು: ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಪುಣ್ಯ ತಿಥಿಯಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ,ರವೀಂದ್ರ ಶೆಟ್ಟಿ ಉಳಿದೊಟ್ಟು,ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಸುಳ್ಯ ಮಂಡಲ ಕಾರ್ಯದರ್ಶಿ ಗಣೇಶ ಉದನಡ್ಕ, ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ. ,ಕಾರ್ಯದರ್ಶಿ ಆಶಾ ರೈ ಕಲಾಯಿ,ಸವಣೂರು ಗ್ರಾ.ಪಂ.ಸದಸ್ಯ ಹರೀಶ್ ಕಾಯರಗುರಿ ಸೇರಿದಂತೆ ಪ್ರಮುಖರು,ಅಂಕತಡ್ಕ ಫ್ರೆಂಡ್ಸ್ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here